ಟಿವಿ ಲೋಕದಲ್ಲಿ ಹೊಸ ದಾಖಲೆ ಮಾಡಿದ ಜೊತೆ ಜೊತೆಯಲಿ ಧಾರವಾಹಿ

ಶುಕ್ರವಾರ, 20 ಸೆಪ್ಟಂಬರ್ 2019 (08:57 IST)
ಬೆಂಗಳೂರು: ಕಿರುತೆರೆಯಲ್ಲಿ ಇದೀಗ ಧಾರವಾಹಿಗಳು ಯಾವ ಸಿನಿಮಾಗೂ ಕಮ್ಮಿಯಿಲ್ಲದ ರೀತಿ ಪೈಪೋಟಿ ನಡೆಸುತ್ತಿದೆ. ಈ ನಡುವೆ ಮೊನ್ನೆಯಷ್ಟೇ ಆರಂಭವಾದ ಜೊತೆ ಜೊತೆಯಲಿ ಧಾರವಾಹಿ ಹೊಸ ದಾಖಲೆ ಮಾಡಿದೆ.


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಆರೂರು ಜಗದೀಶ್ ನಿರ್ದೇಶನದ ನಟ ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ ಜೊತೆ ಜೊತೆಯಲಿ ಧಾರವಾಹಿ ಈಗ ಟಿಆರ್ ಪಿ ವಿಚಾರದಲ್ಲಿ ದಾಖಲೆ ಮಾಡಿದೆ.

ಮೊದಲ ವಾರದಲ್ಲೇ 11.8 ಟಿವಿಆರ್ ಅಂಕ ಪಡೆದು ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊದಲ ವಾರದಲ್ಲೇ ಗರಿಷ್ಠ ರೇಟಿಂಗ್ ಪಡೆದು ನಂ.1 ಧಾರವಾಹಿಯಾದ ದಾಖಲೆ ಮಾಡಿದೆ. ಇದೀಗ ಉದಯ ಟಿವಿಯ ನಂದಿನಿ ಧಾರವಾಹಿ, ಜೀ ಕನ್ನಡದ ಗಟ್ಟಿಮೇಳ ಧಾರವಾಹಿಯನ್ನೂ ಹಿಂದಿಕ್ಕಿ ನಂ.1 ಆಗಿದೆ. ವಿಶೇಷವೆಂದರೆ ಜೀ ಕನ್ನಡದಲ್ಲಿ ಪ್ರಸಾರವಾದ ಯಾವುದೇ ಧಾರವಾಹಿಯೂ ಇಷ್ಟೊಂದು ರೇಟಿಂಗ್ ಪಡೆದ ದಾಖಲೆಯೇ ಇರಲಿಲ್ಲ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಧಾರವಾಹಿಯಲ್ಲಿ ಅನಿರುದ್ಧ್ ಮತ್ತು ಮೇಘಾ ನಟನೆ ಈಗಾಗಲೇ ಎಲ್ಲರ ಮನಸ್ಸು ಸೂರೆಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ