ಚಿತ್ರೀಕರಣ ಶುರುವಾದರೂ ಕನ್ನಡ ಕಿರುತೆರೆ ಕಲಾವಿದರಿಗೆ ಮೊದಲಿನಂತೆ ವೇತನ ಸಿಗುತ್ತಿಲ್ಲ!

ಭಾನುವಾರ, 26 ಜುಲೈ 2020 (12:03 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ಇಫೆಕ್ಟ್ ಕನ್ನಡ ಕಿರುತೆರೆ ಲೋಕವನ್ನು ಇನ್ನಿಲ್ಲದಂತೆ ಕಾಡಿದೆ. ಹಲವು ಧಾರವಾಹಿಗಳು ನಿಂತು ಹೋದರೆ, ಇನ್ನು ಹಲವು ಧಾರವಾಹಿಗಳು ಟಿಆರ್ ಪಿ ಗಳಿಸಲು ಒದ್ದಾಡುತ್ತಿವೆ.


ಈ ನಡುವೆ ಲಾಕ್ ಡೌನ್ ನಿಂದಾಗಿ ಆರ್ಥಿಕ ನಷ್ಟದಲ್ಲಿರುವ ಕಿರುತೆರೆ ಲೋಕ ಈಗ ಕಲಾವಿದರ ವೇತನಕ್ಕೆ ಕತ್ತರಿ ಹಾಕಿದೆ. ಹೆಚ್ಚಿನ ಎಲ್ಲಾ ಧಾರವಾಹಿ ತಂಡಗಳೂ ಹೆಚ್ಚು ವೇತನ ಪಡೆಯುತ್ತಿರುವ ಕಲಾವಿದರಿಗೆ ಶೇ. 20 ರಷ್ಟು ವೇತನ ಕಡಿತ ಮಾಡುತ್ತಿದೆ.

ಹಲವು ಕಲಾವಿದರು ಮಾರ್ಚ್ ನಿಂದ ಈಚೆಗೆ ವೇತನವನ್ನೇ ಕಂಡಿಲ್ಲ.  ಕೆಲವಾರು ಧಾರವಾಹಿಗಳು ಅರ್ಧಕ್ಕೇ ನಿಂತಿರುವುದರಿಂದ ಹಲವು ಕಲಾವಿದರು, ತಂತ್ರಜ್ಞರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಹಾಗಿದ್ದರೂ ಸದ್ಯಕ್ಕೆ ಕೆಲಸವಾದರೂ ಇದೆಯಲ್ಲಾ ಎಂದು ಅನಿವಾರ್ಯವಾಗಿ ಹಲವು ಕಲಾವಿದರು ಕಡಿಮೆ ವೇತನವಾದರೂ ಧಾರವಾಹಿಗೆ ಬಣ್ಣ ಹಚ್ಚುತ್ತಿದ್ದಾರೆ. ಇದು ಸದ್ಯದ ಕಿರುತೆರೆ ಲೋಕದ ಅವಸ್ಥೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ