ಸರ್ಕಾರಕ್ಕೆ ಮೊರೆ ಇಟ್ಟರೂ ಕನ್ನಡ ಕಿರುತೆರೆ ಕಲಾವಿದರ ಅಳಲು ನಿಂತಿಲ್ಲ

ಸೋಮವಾರ, 20 ಜುಲೈ 2020 (09:31 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಕನ್ನಡ ಧಾರವಾಹಿಗಳು ಒಂದೊಂದಾಗಿ ನಿಂತು ಇದ್ದಕ್ಕಿದ್ದಂತೆ ಡಬ್ಬಿಂಗ್ ಧಾರವಾಹಿಗಳ ಪ್ರಸಾರ ಆರಂಭವಾದಾಗ ಕನ್ನಡ ಕಲಾವಿದರು, ತಂತ್ರಜ್ಞರು ಗಾಬರಿ ಬಿದ್ದುಹೋದರು. ತುತ್ತಿನ ಚೀಲಕ್ಕೆ ಏಟು ಬಿದ್ದಾಗ ಸರ್ಕಾರದ ಕದ ತಟ್ಟಿದರು.


ಈಗಾಗಲೇ ಕನ್ನಡ ಕಲಾವಿದರು ಒಟ್ಟಾಗಿ ಸಭೆ ನಡೆಸಿ ಸಚಿವ ಆರ್ ಅಶೋಕ್ ಮೂಲಕ ರಾಜ್ಯ ಸರ್ಕಾರಕ್ಕೆ ಡಬ್ಬಿಂಗ್ ಧಾರವಾಹಿಗಳ ಮೇಲೆ ನಿರ್ಬಂಧ ವಿಧಿಸಲು ಮನವಿ ಮಾಡಲಾಗಿತ್ತು.

ಹಾಗಿದ್ದರೂ ಕನ್ನಡ ಕಿರುತೆರೆ ವಾಹಿನಿಗಳು ಡಬ್ಬಿಂಗ್ ಧಾರವಾಹಿಗಳಿಗೆ ಮಣೆ ಹಾಕುವುದನ್ನು ನಿಲ್ಲಿಸಿಲ್ಲ. ವಿಶೇಷವೆಂದರೆ ಮತ್ತಷ್ಟು ಧಾರವಾಹಿಗಳು ಬೇರೆ ಭಾಷೆಯಿಂದ ಕನ್ನಡಕ್ಕೆ ಬರುತ್ತಲೇ ಇರುತ್ತವೆ. ಇದರಿಂದಾಗಿ ಕನ್ನಡ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಭವಿಷ್ಯದ ಬಗ್ಗೆ ಭಯ ಶುರುವಾಗಿದೆ. ಆದರೆ ಈ ಬಗ್ಗೆ ಯಾವುದನ್ನೂ ಬಾಯಿಬಿಟ್ಟು ಹೇಳಲೂ ಆಗದೇ ಬಿಡಲೂ ಆಗದೇ ಒದ್ದಾಡುತ್ತಿದ್ದಾರೆ. ಈ ವಾರ ಮತ್ತಷ್ಟು ಧಾರವಾಹಿಗಳು ಕನ್ನಡಕ್ಕೆ ಎಂಟ್ರಿ ಕೊಟ್ಟಿವೆ. ಹೀಗೇ ಆದರೆ ಕನ್ನಡ ಕಿರುತೆರೆ ಕಲಾವಿದರ ಬದುಕು ಬೀದಿಗೆ ಬೀಳುವುದು ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ