ಒಳ್ಳೆ ಕೆಲಸಕ್ಕೆ ಕೂದಲಿಗೆ ಕತ್ತರಿ ಹಾಕಿದ ನಟಿ ಕಾವ್ಯಾ ಶಾಸ್ತ್ರಿ
ಇದೀಗ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗಲು ಮುಂದಾಗಿದ್ದಾರೆ. ಕ್ಯಾನ್ಸರ್ ನಿಂದ ನನ್ನ ಚಿಕ್ಕಪ್ಪನನ್ನು ಕಳೆದುಕೊಂಡೆ. ಆ ನೋವನ್ನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಕೂದಲು ದಾನ ಮಾಡಲು ನಿರ್ಧರಿಸಿದ್ದೇನೆ. ಒಂದೊಳ್ಳೆ ಕೆಲಸಕ್ಕೆ ನಾನು ಮುಂದಾಗಿದ್ದೇನೆ. ನೀವೂ ಈ ಕೆಲಸಕ್ಕೆ ಕೈ ಜೋಡಿಸಿ ಎಂದು ಕಾವ್ಯಾ ಮನವಿ ಮಾಡಿದ್ದಾರೆ. ಅವರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.