ಕಿಚ್ಚ ಸುದೀಪ್ ಗಾಗಿ ಬಿಗ್ ಬಾಸ್ ಶ್ರುತಿ ಪ್ರಕಾಶ್ ಮಾಡಿದ್ದೇನು ಗೊತ್ತಾ?

ಗುರುವಾರ, 15 ಫೆಬ್ರವರಿ 2018 (11:13 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮುಗಿದರೂ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಜತೆಗಿನ ನಂಟು ಬಿಟ್ಟಿಲ್ಲ ಎನ್ನುವುದಕ್ಕೆ ಈ ಸುದ್ದಿಯೇ ಸಾಕ್ಷಿ.
 

ಶ್ರುತಿ ಪ್ರಕಾಶ್ ಎಂಬ ಚೆಲುವೆ ಬಿಗ್ ಬಾಸ್ ನಲ್ಲಿದ್ದಷ್ಟೂ ದಿನ ಹಾಡಿನ ಮೂಲಕವೇ, ತಮ್ಮ ಮುಗ್ಧತೆಯ ಮೂಲಕವೇ ಜನರ ಗಮನ ಸೆಳೆದಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಮುಂಜಾನೆ ಮಂಜಲ್ಲಿ ಹಾಡು ಕಲಿಯುತ್ತಿದ್ದ ಶ್ರುತಿ ಪ್ರಕಾಶ್ ಕೊನೆಗೂ ಆ ಹಾಡು ಕಲಿತಿದ್ದಾರೆ.

ಅಷ್ಟೇ ಅಲ್ಲ, ಕಿಚ್ಚ ಸುದೀಪ್ ಗಾಗಿ ಟ್ವಿಟರ್ ನಲ್ಲಿ ಹಾಡು ಹಾಡಿ ಹೇಗಿದೆ ನೋಡಿ ಸರ್ ಎಂದು ಕೇಳಿದ್ದಾಳೆ. ಶ್ರುತಿ ಹಾಡು ಕೇಳಿ ಕಿಚ್ಚ ಸುದೀಪ್ ಕೂಡಾ ಖುಷಿಯಾಗಿ ಚೆನ್ನಾಗಿದೆ.. ನೀನು ಈ ಹಾಡನ್ನು ಹಾಡುವುದನ್ನು ಕೇಳುವುದೇ ನನಗೆ ಖುಷಿ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ