ಇಂದಿಗೆ ಪ್ರಸಾರ ನಿಲ್ಲಿಸಲಿವೆ ಜನಪ್ರಿಯ ಧಾರವಾಹಿಗಳು

ಶುಕ್ರವಾರ, 3 ಏಪ್ರಿಲ್ 2020 (09:19 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಚಿತ್ರೀಕರಣ ಸಾಧ್ಯವಾಗದೇ ಬಹುತೇಕ ಧಾರವಾಹಿಗಳು ಇಂದು ಕೊನೆಯ ಹೊಸ ಸಂಚಿಕೆ ಪ್ರಸಾರ ಮಾಡಲಿವೆ.


ಸೋಮವಾರದಿಂದ ಶುಕ್ರವಾದವರೆಗೆ ಪ್ರಸಾರವಾಗುವ ಅನೇಕ ಕನ್ನಡ ಧಾರವಾಹಿಗಳಿಗೆ ಇಂದೇ ಕೊನೆಯ ಸಂಚಿಕೆ. ಇನ್ನು ಮುಂದೆ ಸರ್ಕಾರದ ಸೂಚನೆಗಾಗಿ ಕಾಯಬೇಕಾಗಿದ್ದು, ಅದಾದ ಬಳಿಕವೇ ಹೊಸ ಸಂಚಿಕೆಗಳ ಚಿತ್ರೀಕರಣ ನಡೆಯಬೇಕಿದೆ.

ಜೀ ಕನ್ನಡ ವಾಹಿನಿಯ ಎಲ್ಲಾ ಧಾರವಾಹಿಗಳಿಗೂ ಇಂದು ಕೊನೆಯ ಸಂಚಿಕೆ. ಇದಾದ ಬಳಿಕ ವಾಹಿನಿ ಯಾವ ತೀರ್ಮಾನ ಕೈಗೊಳ್ಳುತ್ತೋ ಅದರಂತೆ ನಡೆದುಕೊಳ್ಳುವುದಾಗಿ ಈಗಾಗಲೇ ಧಾರವಾಹಿ ತಂಡಗಳು ತೀರ್ಮಾನಕ್ಕೆ ಬಂದಿವೆ.

ಸ್ಟಾರ್ ಸುವರ್ಣ ವಾಹಿನಿಯ ಪ್ರೇಮಲೋಕ, ಉದಯ ವಾಹಿನಿಯ ನಂದಿನಿ ಧಾರವಾಹಿಗಳು ಈ ವಾರದ ಆರಂಭದಿಂದಲೇ ಬ್ಯಾಂಕಿಂಗ್ ಎಪಿಸೋಡ್ ಗಳಿಲ್ಲದೇ ಹಳೆಯ ಸಂಚಿಕೆಗಳನ್ನೇ ಮರಳಿ ಪ್ರಸಾರ ಮಾಡುತ್ತಿವೆ. ಬಹುತೇಕ ವಾಹಿನಿಗಳೂ, ಧಾರವಾಹಿಗಳೂ ಇದೇ ಹಾದಿಯಲ್ಲಿ ನಡೆಯುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ