ಕನ್ನಡದ ಕೋಟ್ಯಾಧಿಪತಿಯಲ್ಲಿ ಯುವ ಸಂಸದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಆಟ!

ಗುರುವಾರ, 5 ಸೆಪ್ಟಂಬರ್ 2019 (09:27 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಿಸುವ ಕನ್ನಡದ ಕೋಟ್ಯಾಧಿಪತಿ ಜನಪ್ರಿಯ ಕ್ವಿಜ್ ಕಾರ್ಯಕ್ರಮದಲ್ಲಿ ಯುವ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಈ ವಾರ ಭಾಗವಹಿಸುತ್ತಿದ್ದಾರೆ.

 

ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಪುನೀತ್ ಜತೆ ಜಂಟಿಯಾಗಿ ಕೋಟ್ಯಾಧಿಪತಿ ಆಡಲಿದ್ದಾರೆ.

ವಿಶೇಷವೆಂದರೆ ಇಬ್ಬರೂ ಬಿಜೆಪಿ ಸಂಸದರು ಆಡಿ ಸಿಕ್ಕ ಹಣವನ್ನು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ದಾನ ಮಾಡಲಿದ್ದಾರೆ. ಆ ಮೂಲಕ ಕೋಟ್ಯಾದಿಪತಿಯಲ್ಲಿ ಇವರು ಎಷ್ಟು ಹಣ ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ