ನಿಮಗೂ ಮನೆಯಲ್ಲಿ ಅಕ್ಕ ತಂಗೀರು ಇಲ್ವಾ? ಕಿರುತೆರೆ ನಟಿ ನೇಹಾ ಗೌಡ ಆಕ್ರೋಶ
ಇದರ ಬಗ್ಗೆ ನೇಹಾ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಸುಳ್ಳು ಸುದ್ದಿ ಪ್ರಕಟಿಸುವ ಮೊದಲು ನಿಮ್ಮ ಮನೆಯಲ್ಲಿರುವ ಅಕ್ಕ, ತಂಗಿ ಅಥವಾ ನಿಮ್ಮ ಅಮ್ಮಂದಿರ ಬಗ್ಗೆ ಯೋಚಿಸಿ. ಅಥವಾ ನಿಮ್ಮ ಬಗ್ಗೆ ಯೋಚಿಸಿ. ನಿಮ್ಮ ಬಗ್ಗೆ ಯಾರಾದರೂ ಹೀಗೆ ಸುಳ್ಳು ಬರೆದರೆ ಹೇಗಿರುತ್ತದೆ ಎಂದು ಯೋಚಿಸಿ. ಇಂತಹ ಸುದ್ದಿಗಳು ನಮಗೆ ಹತಾಶೆ, ಆಕ್ರೋಶ ಹುಟ್ಟಿಸುತ್ತದೆ. ಯಾಕೆ ಇಂತಹ ಸುಳ್ಳುಗಳನ್ನು ಬರೆಯುತ್ತೀರೋ ಅದು ಹೇಗೆ ಮನಸ್ಸು ಬರುತ್ತದೋ ಎಂದು ನೇಹಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.