ಟಿವಿಯಲ್ಲಿ ಇಂದು ಕಿಚ್ಚ ಸುದೀಪ್ ಪೈಲ್ವಾನ, ನೀನಾಸಂ ಸತೀಶ್ ‘ಬ್ರಹ್ಮಚಾರಿ’ ದರ್ಶನ

ಭಾನುವಾರ, 12 ಜನವರಿ 2020 (09:13 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುಭಾಷೆಗಳಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಲನಚಿತ್ರ ಪೈಲ್ವಾನ್ ಇಂದು ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರವಾಗುತ್ತಿದೆ.


ಜೀ ಕನ್ನಡ ಪೈಲ್ವಾನ್ ಸಿನಿಮಾ ಹಕ್ಕು ಖರೀದಿ ಮಾಡಿತ್ತು. ಅದರಂತೆ ಇಂದು ಸಂಜೆ 7 ಗಂಟೆಗೆ ಪೈಲ್ವಾನ್ ಸಿನಿಮಾ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಇದಕ್ಕೂ ಮೊದಲು ಹಿಂದಿಯಲ್ಲಿ ಈ ಸಿನಿಮಾ ಪ್ರಸಾರವಾಗಿತ್ತು. ಕಿಚ್ಚ ಸುದೀಪ್ ಜತೆಗೆ ಸುನಿಲ್ ಶೆಟ್ಟಿಯ ಖಡಕ್ ಅಭಿನಯ ನೋಡಲು ಈ ಸಿನಿಮಾ ನೋಡಲೇಬೇಕು.

ಇನ್ನೊಂದೆಡೆ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಅಭಿನಯದ ಕಾಮಿಡಿ ಎಂಟರ್ ಟೈನರ್ ‘ಬ್ರಹ್ಮಚಾರಿ’ ಸಿನಿಮಾ ಪ್ರಸಾರವಾಗಲಿದೆ. ಇದೂ ಕೂಡಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಹಿಟ್ ಆದ ಸಿನಿಮಾ. ಹೀಗಾಗಿ ಇಂದಿನ ದಿನದಂತ್ಯಕ್ಕೆ ಭರ್ಜರಿ ಮನರಂಜನೆ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ