ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿಯ ರೌಡಿ ಬೇಬಿ ಅಮೂಲ್ಯ ಆಗಿ ಮಿಂಚಿದ್ದ ನಟಿ ನಿಶಾ ರವಿಕೃಷ್ಣನ್ ಈಗ ಮತ್ತೆ ಕನ್ನಡ ಕಿರುತೆರೆಗೆ ಡಾಕ್ಟರ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಜೀ ಕನ್ನಡ ವಾಹಿನಿ ಮೂಲಕವೇ ನಿಶಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಗಟ್ಟಿಮೇಳ ಧಾರವಾಹಿ ಬಳಿಕ ಕನ್ನಡ ಧಾರವಾಹಿಗಳಿಂದ ನಿಶಾ ಕೆಲವು ಸಮಯ ಬ್ರೇಕ್ ತೆಗೆದುಕೊಂಡಿದ್ದರು. ತೆಲುಗು ಧಾರವಾಹಿಗಳಲ್ಲಿ ಮಿಂಚುತ್ತಿದ್ದ ನಿಶಾರನ್ನು ಕನ್ನಡ ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದರು.
ಆದರೆ ಈಗ ನಿಶಾ ಮತ್ತೆ ಕನ್ನಡ ಧಾರವಾಹಿಗೆ ಬರುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಅಣ್ಣಯ್ಯ ಧಾರವಾಹಿಯ ನಾಯಕಿ ಪಾತ್ರದ ಮೂಲಕ ನಿಶಾ ಬರುತ್ತಿದ್ದಾರೆ. ಈ ಧಾರವಾಹಿಯಲ್ಲಿ ಅಣ್ಣ-ತಂಗಿಯರ ಕತೆಯಿದೆ. ಅಣ್ಣಯ್ಯನ ಪ್ರೀತಿಯ ಹುಡುಗಿ ಪಾರ್ವತಿ ಪಾತ್ರವನ್ನು ನಿಶಾ ಮಾಡಲಿದ್ದಾರೆ.
ವಿಶೇಷವೆಂದರೆ ನಿಶಾ ಇಲ್ಲಿ ವೈದ್ಯೆಯ ಪಾತ್ರ ಮಾಡುತ್ತಿದ್ದಾರೆ. ಒಂದು ಹಳ್ಳಿ, ಅಲ್ಲೊಬ್ಬ ಅಣ್ಣಯ್ಯ ಮತ್ತು ಆತನ ಪ್ರೀತಿಯ ತಂಗಿಯಂದಿರು. ವೈದ್ಯೆಯಾಗಿ ನಿಶಾ ಇರುವ ಪ್ರೋಮೋ ಒಂದನ್ನು ಜೀ ವಾಹಿನಿ ಹೊರಬಿಟ್ಟಿದೆ. ನಿಶಾರನ್ನು ಮತ್ತೆ ತೆರೆ ಮೇಲೆ ನೋಡುತ್ತಿರುವುದಕ್ಕೆ ಭಾರೀ ಖುಷಿ ವ್ಯಕ್ತಪಡಿಸುತ್ತಿದ್ದಾರೆ.