ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟ ಗೌರಿ ಮದುವೆ’ ಧಾರವಾಹಿ ಖ್ಯಾತಿಯ ರಂಜಿನಿ ರಾಘವನ್ ಹೊಸ ಸಿನಿಮಾ ಡಿಸೆಂಬರ್ ನಲ್ಲಿ ತೆರೆ ಕಾಣಲಿದೆ. ‘
ರಾಜಹಂಸ’ ಎಂಬ ಹೆಸರಿನ ಈ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕ. ಈ ಚಿತ್ರ ಜನಮನ ಸಿನೆಮಾಸ್ ನಿರ್ಮಾಣದಲ್ಲಿ ಮೂಡಿಬರುತ್ತಿದೆ.
ಇದುವರೆಗೆ ಪುಟ್ಟ ಗೌರಿಯಾಗಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ದ ರಂಜಿನಿಗೆ ಇದರಲ್ಲಿ ಹಳ್ಳಿಯಿಂದ ಬಂದ ಪ್ಯಾಟೆ ಹುಡುಗಿ ಪಾತ್ರವಂತೆ. “ಇದೊಂದು ಪಕ್ಕಾ ಲವ್ ಸ್ಟೋರಿ. ಗೌರಿ ಪಾತ್ರಕ್ಕಿಂತ ಭಿನ್ನವಾಗಿದೆ. ಈಗಾಗಲೇ ಎಲ್ಲಿ ಹೋದರೂ ಅಭಿಮಾನಿಗಳು ಇದೇ ಪಾತ್ರದ ಬಗ್ಗೆ ಕೇಳುತ್ತಿದ್ದಾರೆ. ಯೂ ಟ್ಯೂಬ್ ನಲ್ಲಿ ಚಿತ್ರದ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಪುಟ್ಟಗೌರಿ ಸೀರಿಯಲ್ ಪಾತ್ರಕ್ಕೆ ಗುಡ್ ಬೈ ಹೇಳ್ತೀರಾ ಅಂತಾನೂ ಕೇಳುವವರಿದ್ದಾರೆ. ಆದರೆ ಸಿನಿಮಾಗಾಗಿ ನಾನು ಪುಟ್ಟ ಗೌರಿ ಪಾತ್ರ ಬಿಡುವ ಛಾನ್ಸೇ ಇಲ್ಲ” ಎನ್ನುತ್ತಾರೆ ರಂಜಿನಿ.
ಪುಟ್ಟಗೌರಿ ಮದುವೆ, ಆಕಾಶ ದೀಪ ಧಾರವಾಹಿ ಸೇರಿದಂತೆ ರಂಗಭೂಮಿಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿರುವ ರಂಜಿನಿಗೆ ಇದು ಮೊದಲ ಸಿನಿಮಾ. ಪುಟ್ಟ ಗೌರಿ ಇಮೇಜ್ ನಿಂದ ಹೊರಬರಲು ಕಷ್ಟವೇನಾಗಿಲ್ಲ. ಆದರೆ ಪ್ರತಿ ಪಾತ್ರಕ್ಕೂ ಮೊದಲು ಸಣ್ಣ ತಯಾರಿ ಮಾಡಿಕೊಳ್ಳುತ್ತೇನೆಂದು ರಂಜಿನಿ ಹೇಳಿಕೊಳ್ಳುತ್ತಾರೆ. ಎಲ್ಲಾ ಅಂದುಕೊಂಡಂತೆ ಆದರೆ ಸದ್ಯದಲ್ಲೇ ಪುಟ್ಟ ಗೌರಿಯನ್ನು ಬೆಳ್ಳಿತೆರೆಯಲ್ಲಿ ನೋಡಲಿದ್ದೀರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ