ಅಮೆರಿಕಾದಲ್ಲಿ ಪತ್ನಿ ರಾಧಿಕಾರನ್ನು ಕಾಣುತ್ತಿದ್ದಂತೇ ಎತ್ತಿ ಮುದ್ದಾಡಿದ ಯಶ್
ರಾಧಿಕಾ ಪಂಡಿತ್ ಕಳೆದ ಕೆಲವು ದಿನಗಳಿಂದ ಅಮೆರಿಕಾದಲ್ಲಿ ತಮ್ಮ ಅಣ್ಣನ ಜೊತೆಗೆ ಬೀಡುಬಿಟ್ಟಿದ್ದಾರೆ. ಇದೀಗ ಯಶ್ ಕೂಡಾ ತಮ್ಮ ಶೂಟಿಂಗ್ ಕೆಲಸಗಳನ್ನು ಮುಗಿಸಿಕೊಂಡು ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ.
ಬಹಳ ದಿನಗಳ ನಂತರ ಪತಿಯನ್ನು ಕಂಡ ಖುಷಿಯಲ್ಲಿ ರಾಧಿಕಾ ತಬ್ಬಿ ಮುದ್ದಾಡಿದ್ದಾರೆ. ಯಶ್ ತಮ್ಮ ಪತ್ನಿಯನ್ನು ಚಿಕ್ಕ ಮಗುವಿನಂತೆ ಎತ್ತಿ ಮುದ್ದಾಡಿದ್ದಾರೆ. ಇವರಿಬ್ಬರ ರೊಮ್ಯಾಂಟಿಕ್ ಫೋಟೋಗೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಲೈಕ್ಸ್, ಕಾಮೆಂಟ್ ಮಾಡಿದ್ದಾರೆ.
ಈ ಮುದ್ದಾದ ಜೋಡಿಗೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ ಎಂದು ಹಲವರು ಹಾರೈಸಿದ್ದಾರೆ. ಇನ್ನು ಕೆಲವರು ನಿಮ್ಮನ್ನು ಎತ್ತಿಕೊಂಡಿರುವುದು ನೋಡಿದ್ರೆ ಯಶ್ ಬಾಸ್ ಎಷ್ಟು ವರ್ಕೌಟ್ ಮಾಡ್ತಾರೆ ಎನ್ನುವುದು ಕನ್ ಫರ್ಮ್ ಆಗುತ್ತದೆ ಎಂದು ಕಾಲೆಳೆದಿದ್ದಾರೆ.