ಬಿಗ್ ಬಾಸ್ ಮನೆಗೆ ಬಂದ ಪ್ರದೀಪ್ ಈಶ್ವರ್ ಸೀಕ್ರೆಟ್ ಬಯಲು
ಪ್ರದೀಪ್ ಈಶ್ವರ್ ಮನೆಗೆ ಬಂದ ಪ್ರೋಮೋ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಪ್ರೋಮೋದಲ್ಲಿ ಪ್ರದೀಪ್ ಈಶ್ವರ್ ನಾನು ಸ್ಪರ್ಧಿಯಾಗಿ ಮನೆಗೆ ಬಂದಿದ್ದೇನೆ ಎಂದಿದ್ದರು. ಇದನ್ನು ನೋಡಿದ ತಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದ್ದವು. ಸಂಸ್ಥೆಯೊಂದು ಶಾಸಕರ ವಿರುದ್ಧ ವಿಧಾನಸಭೆ ಸ್ಪೀಕರ್ ಗೆ ದೂರು ಕೂಡಾ ಸಲ್ಲಿಸಿತ್ತು.
ಆದರೆ ನಿನ್ನೆ ಇಡೀ ಎಪಿಸೋಡ್ ನೋಡಿದ ಬಳಿಕ ಪ್ರದೀಪ್ ಈಶ್ವರ್ ಮನೆಗೆ ಬಂದಿದ್ದು ಕೇವಲ ಅತಿಥಿಯಾಗಿ ಎಂದು ರಿವೀಲ್ ಆಗಿದೆ. ನಾನೂ ಸ್ಪರ್ಧಿ ಎಂದು ಮೊದಲು ಪ್ರದೀಪ್ ಎಲ್ಲರನ್ನು ಪ್ರಾಂಕ್ ಮಾಡಿದ್ದರು. ಆದರೆ ಬಳಿಕ ಅವರು ಕೇವಲ ಅತಿಥಿಯಾಗಿ ಮನೆಗೆ ಬಂದಿದ್ದು ಗೊತ್ತಾಗಿದೆ. ಸ್ಪೂರ್ತಿಯುತ ಮಾತುಗಳನ್ನು ಆಡಿ ಸ್ಪರ್ಧಿಗಳನ್ನು ಹುರಿದುಂಬಿಸಲು ಬಂದಿದ್ದಾರಷ್ಟೆ.