ಬಿಗ್ ಬಾಸ್ ಕನ್ನಡ 10 ಕ್ಕೆ ಚಾರ್ಲಿ ಬರಲೇ ಇಲ್ಲ ಯಾಕೆ?

ಸೋಮವಾರ, 9 ಅಕ್ಟೋಬರ್ 2023 (09:30 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಿಚ್ಚ ಸುದೀಪ್ ನಡೆಸಿಕೊಡುವ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10 ಕ್ಕೆ ನಿನ್ನೆ ಚಾಲನೆ ದೊರೆತಿದೆ. ವಿವಿಧ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ.

ಆದರೆ ವೀಕ್ಷಕರು ಕಾದಿದ್ದು 777 ಚಾರ್ಲಿ ಸಿನಿಮಾ ಖ್ಯಾತಿಯ ಮುದ್ದಿನ ನಾಯಿ ಚಾರ್ಲಿಗೆ. ಚಾರ್ಲಿ ಈ ಸೀಸನ್ ನಲ್ಲಿ ಮೊದಲ ಕಂಟೆಸ್ಟೆಂಟ್ ಆಗಿ ಮನೆಯೊಳಗೆ ಪ್ರವೇಶ ಪಡೆಯಲಿದ್ದಾಳೆ ಎಂದು ಘೋಷಣೆಯಾಗಿತ್ತು. ಆದರೆ ಚಾರ್ಲಿ ಬರಲೇ ಇಲ್ಲ. ಇದು ವೀಕ್ಷಕರಿಗೆ ತೀವ್ರ ನಿರಾಸೆ ತಂದಿದೆ.

777 ಚಾರ್ಲಿ ಸಿನಿಮಾ ಖ್ಯಾತಿಯ ಸಂಗೀತ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಅವರು ವೇದಿಕೆಗೆ ಬಂದಾಗ ಸುದೀಪ್ ‘ಇಡೀ ಕರ್ನಾಟಕ ಒಂದು ಅತಿಥಿಗಾಗಿ ಕಾಯುತ್ತಿದೆ. ಅದು ಯಾರು ಎನ್ನೋದು ನಿಮಗೆ ಗೊತ್ತು’ ಎಂದರು. ಇದಕ್ಕೆ ಸಂಗೀತಾ ಚಾರ್ಲಿ ಎಂದರು. ಚಾರ್ಲಿಯನ್ನು ಕರೆಯುವಂತೆ ಸಂಗೀತಾಗೆ ಸೂಚಿಸಿದರು. ಆದರೆ ಕರೆದರೂ ಚಾರ್ಲಿ ಬರಲಿಲ್ಲ. ಇದಕ್ಕೆ ಸುದೀಪ್ ಬಹುಶಃ ನೀವು ಕರೆದಿದ್ದು ಕೇಳಿರುತ್ತದೆ. ಪರ್ಮಿಷನ್ ತೆಗೆದುಕೊಳ್ಳೋಕೆ ಕಾದಿರುತ್ತದೆ. ನಾರ್ತ್ ಇಂಡಿಯಾಗೆ ಹೋಗಿದೆ, ಬರುತ್ತೆ’ ಎಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಾರ್ಲಿ ಬಿಗ್ ಬಾಸ್ ಗೆ ಮನೆಗೆ ಬರಬಹುದು ಎಂಬ ಸುಳಿವು ನೀಡಿದ್ದಾರೆ ಸುದೀಪ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ