ಬಿಗ್ ಬಾಸ್ ಶೋನಲ್ಲಿ ಶಾಸಕ ಪ್ರದೀಪ್ ಈಶ್ವರ್: ದಾಖಲಾಯ್ತು ದೂರು
ಪ್ರದೀಪ್ ಇಂದು ಮನೆಯೊಳಗೆ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿದ್ದಂತೇ ಅವರ ಮೇಲೆ ದೂರು ದಾಖಲಾಗಿದೆ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಗೆ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ದೂರು ಸಲ್ಲಿಸಿದೆ.
ಪ್ರದೀಪ್ ಈಶ್ವರ್ ಒಬ್ಬ ಜವಾಬ್ಧಾರಿಯುತ ಸ್ಥಾನದಲ್ಲಿರುವ ಶಾಸಕ. ಅವರು ಆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆದರೆ ಅದೆಲ್ಲವನ್ನೂ ಬಿಟ್ಟು ಬಿಗ್ ಬಾಸ್ ಎಂಬ ಮನರಂಜನಾ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಸಂಸ್ಥೆ ದೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಕೆಲವು ನೆಟ್ಟಿಗರೂ ಪ್ರದೀಪ್ ಈಶ್ವರ್ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 100 ದಿನಗಳ ಕಾಲ ಒಬ್ಬ ಶಾಸಕ ಜನರ ಕೈಗೆ ಸಿಗದೇ ಯಾವುದೋ ಮನರಂಜನಾ ಶೋನಲ್ಲಿ ಭಾಗಿಯಾಗುತ್ತಿದ್ದರೆ ಆತನ ಶಾಸಕ ಸ್ಥಾನ ರದ್ದು ಮಾಡಬಹುದು ಎಂದು ಹಲವರು ಪ್ರತಿಪಾದಿಸಿದ್ದಾರೆ.