ಕನ್ನಡ ’ಬಿಗ್ ಬಾಸ್’ ಫೈನಲ್‌ಗೆ ನಟಿ ಶಿಲ್ಪಾ ಶೆಟ್ಟಿ

ಮಂಗಳವಾರ, 24 ಜನವರಿ 2017 (10:21 IST)
ಕಲರ್ಸ್ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 4 ಅಂತಿಮ ಘಟ್ಟ ತಲುಪಿದ್ದು, ಫಿನಾಲೆ ಕಾರ್ಯಕ್ರಮಕ್ಕೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಹೊಸ ರಂಗು ತುಂಬಲಿದ್ದಾರೆ. 
 
ನಟ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮದಲ್ಲಿ ಶಿಲ್ಪಾ ಹೆಜ್ಜೆ ಹಾಕಲಿದ್ದಾರೆ. ಗ್ರ್ಯಾಂಡ್ ಫಿನಾಲೆಗೆ ತಮ್ಮದೇ ಆದಂತ ಹೊಸ ಸ್ಪರ್ಶ ನೀಡಲಿದ್ದಾರೆ ಶಿಲ್ಪಾ ಶೆಟ್ಟಿ. ಅವರ ಆಗಮನದಿಂದ ಗ್ರ್ಯಾಂಡ್ ಫಿನಾಲೆಗೆ ಇನ್ನಷ್ಟು ಕಳೆ ಬಂದಂತಾಗಿದೆ.
 
ಇದೇ ಮೊದಲ ಬಾರಿಗೆ ಬಿಗ್ ಬಾಸ್ ಅಂತಿಮ ಸ್ಪರ್ಧೆಗೆ 5 ಮಂದಿ ಪ್ರವೇಶಿಸಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೋ ಎರಡು ವಾರಗಳ ಕಾಲ ಮುಂದೂಡಲ್ಪಟ್ಟಿದೆ. ಇನ್ನು ಶಿಲ್ಪಾ ಶೆಟ್ಟಿ ವಿಚಾರಕ್ಕೆ ಬರುವುದಾದರೆ ಈ ಹಿಂದೆ ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಚಿತ್ರಗಳಲ್ಲಿ ಅಭಿನಯಿಸಿರುವುದು ಗೊತ್ತೇ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ