ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ನಟಿ ಶ್ವೇತಾ ಆರ್ ಪ್ರಸಾದ್

ಶನಿವಾರ, 4 ನವೆಂಬರ್ 2023 (12:02 IST)
ಬೆಂಗಳೂರು: ಕನ್ನಡ ಕಿರುತೆರೆಯ ಬಹುಬೇಡಿಕೆಯ ನಟಿಯಲ್ಲಿ ಆರಾಧನಾ ಟೀಚರ್ ಖ್ಯಾತಿಯ ನಟಿ ಶ್ವೇತಾ ಆರ್ ಪ್ರಸಾದ್ ಕೂಡಾ ಒಬ್ಬರು.

ಅವರೀಗ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರವಾಹಿ ಮೂಲಕ ಶ್ವೇತಾ ಮತ್ತೆ ಕಿರುತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಈ ಮೊದಲು ಶ್ರೀರಸ್ತು ಶುಭಮಸ್ತು, ರಾಧಾ ರಮಣ ಧಾರವಾಹಿಗಳ ಮೂಲಕ ಶ್ವೇತ ವೀಕ್ಷಕರ ಮನಗೆದ್ದಿದ್ದರು. ರಾಧಾ ರಮಣ ಧಾರವಾಹಿ ಬಳಿಕ ಕಿರುತೆರೆಯಿಂದ ಕೆಲವು ಸಮಯ ದೂರವುಳಿದಿದ್ದರು. ಇದೀಗ ಮತ್ತೆ ಧಾರವಾಹಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಐಎಎಸ್ ಅಧಿಕಾರಿಯಾಗಿ ಶ್ವೇತಾ ವಿಶೇಷ ಪಾತ್ರ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ