ಮತ್ತದೇ ತಪ್ಪು ಮಾಡಿದ ಸಿಹಿಕಹಿ ಚಂದ್ರು.. ಅಪ್ಪನ ವಿರುದ್ಧ ಮಕ್ಕಳು ಗರಂ..!
ಶುಕ್ರವಾರ, 3 ನವೆಂಬರ್ 2017 (10:36 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸತತವಾಗಿ 2ನೇ ದಿನವೂ ಅದೇ ತಪ್ಪು ನಡೆದ ಪರಿಣಾಮ ಬಿಗ್ ಬಾಸ್ ಮನೆಗೆ ಗ್ಯಾಸ್ ಪೂರೈಕೆ ಸ್ಥಗಿತ ಮಾಡಿದ್ದರು. ಕರ್ನಾಟಕ ರಾಜ್ಯೋತ್ಸವದಂದು ಮನೆಯ ಸದಸ್ಯರು ಮತ್ತೆ ಉಪವಾಸ ಇರಬೇಕಾಯಿತು.
ಬೆಳಗ್ಗೆ ತಿಂಡಿ ರೆಡಿ ಮಾಡಿದ್ದ ಸಿಹಿಕಹಿ ಚಂದ್ರು ಗ್ಯಾಸ್ ಸ್ಟೌವ್ ಆರಿಸಲು ಮರೆತಿದ್ದರು. ಇದನ್ನು ಗಮನಿಸಿದ ಬಿಗ್ ಬಾಸ್ ಎಲ್ಲರನ್ನೂ ಲಿವಿಂಗ್ ಏರಿಯಾಗೆ ಕರೆದು ವಿಡಿಯೋ ಪ್ಲೇ ಮಾಡಿದಾಗ ಎಲ್ಲರ ಮುಖ ಚಿಕ್ಕದಾಯಿತು. ತನ್ನ ತಪ್ಪು ಅರಿತ ಚಂದ್ರು ಕ್ಯಾಮೆರಾ ಎದುರು ಬಂದು ತಪ್ಪಿನ ಅರಿವಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಹೀಗೆ ಆಗುವುದಿಲ್ಲ ಎಂದು ಕೇಳಿಕೊಂಡರು.
ಇತ್ತ ಗಾರ್ಡನ್ ಏರಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ನಾನು ಇದೇ ತಪ್ಪು ಮಾಡಿದಾಗ ಜೋರಾಗಿ ಬಂದು ಹೇಳಿದವರು, ಈಗ ಅವರು ತಪ್ಪು ಮಾಡಿದಾಗ ಸೈಲೆಂಟ್ ಆಗಿ ಬಂದು ನಾನೇ ತಪ್ಪು ಮಾಡಿದ್ದು ಎಂದರು. ನನಗೇನೋ ಅಡುಗೆ ಮಾಡಿ ಅನುಭವವಿಲ್ಲ. ಆದರೆ ಅವರು ಅದರಲ್ಲೇ ಪಳಗಿದವರು ಹೀಗೆ ಮಾಡುವುದೇ ಎಂದು ಜಯ ಶ್ರೀನಿವಾಸ್ ಲೇವಡಿ ಮಾಡಿದರು.
ಇತ್ತ ಇಡೀ ದಿನ ಮನೆಯಲ್ಲಿ ಉಪವಾಸ ಇದ್ದ ಸ್ಪರ್ಧಿಗಳು ಗರಂ ಆದರು. ಕೃಷಿ ಮೈಕ್ರೋವೇವ್ ಓವನ್ ನಲ್ಲಿ ಮೊಟ್ಟೆ ಬೇಯಿಸಲು ಸಲಹೆ ನೀಡಿದರು. ಇದಕ್ಕೆ ಸಿಟ್ಟಾದ ತೇಜಸ್ವಿನಿ, ಯಾರು ಏನು ಮಾಡಬೇಡಿ. ಒಮ್ಮೆ ಉಪವಾಸ ಇದ್ರೆ ಎಲ್ಲರು ಬುದ್ಧಿ ಕಲೀತಾರೆ. ಇನ್ನೊಮ್ಮೆ ಹೀಗೆ ಆಗೋದಿಲ್ಲ ಎಂದು ಸಿಡುಕಿದ್ರು.
ಮತ್ತೊಮ್ಮೆ ಚಂದ್ರು ಕ್ಯಾಮೆರಾ ಎದುರು ಕ್ಷಮೆ ಕೋರಿದರು. ಆಗ ಬಿಗ್ ಬಾಸ್ ಮನೆಗೆ ಗ್ಯಾಸ್ ಪೂರೈಕೆ ಮಾಡಿದರು.