ಹಳೇ ಪ್ರೀತಿ ನೆನೆದು ಕಣ್ಣೀರಿಟ್ಟ ಅನುಪಮಾ… ಮಾಜಿ ಲವರ್ ಹೇಳಿದ್ದೇನು…?
ಶುಕ್ರವಾರ, 3 ನವೆಂಬರ್ 2017 (09:50 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಒಂದೊಂದೇ ಲವ್ ಸ್ಟೋರಿಗಳು ತೆರೆದುಕೊಳ್ಳುತ್ತಿವೆ. ಆದರೆ ಮಾಜಿ ಲವರ್ಸ್ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ.
ಅಕ್ಕ ಸೀರಿಯಲ್ ಖ್ಯಾತಿಯ ಅನುಪಮಾ ಗೌಡ ಹಾಗೂ ಜಗನ್ ಈ ಹಿಂದೆ ಜೋಡಿಹಕ್ಕಿಯಾಗಿದ್ದವರು. ಹೀಗಾಗಿ ಒಬ್ಬರಿಗೊಬ್ಬರಿಗೆ ತಾವು ಬಿಗ್ ಬಾಸ್ ಮನೆಯಲ್ಲಿ ಭೇಟಿ ಮಾಡ್ತೀವಿ ಎಂದು ತಿಳಿದಿರಲಿಕ್ಕಿಲ್ಲ. ಆದರೆ ಮನೆಗೆ ಬಂದ ಕೂಡಲೇ ಜಗನ್ ನೋಡಿ ಅನುಪಮಾಗೆ ಶಾಕ್ ಆಗಿತ್ತಂತೆ. ಆದರೂ ಎಲ್ಲಾ ಸಂದರ್ಭದಲ್ಲಿಯೂ ಜಗನ್ ನಡುವೆ ಅಂತರ ಕಾಯ್ದುಕೊಂಡಿದ್ದರು.
ನಿನ್ನೆ ಬಿಗ್ ಬಾಸ್ ಮನೆಯಲ್ಲಿ ತೇಜಸ್ವಿನಿ ಜತೆ ಮಾತನಾಡುತ್ತಿರುವಾಗ ಅನುಪಮಾ ತುಂಬಾ ಭಾವುಕರಾದರು. ಹಳೆ ನೆನಪುಗಳನ್ನ ನೆನೆದು ಕಣ್ಣೀರಿಟ್ಟರು. ತನ್ನ ಕೈ ಮೇಲಿರುವ ಕಪಲ್ ರಿಂಗ್ ಟ್ಯಾಟೂ ನೋಡಿ ಬಿಕ್ಕಳಿಸಿ ಅತ್ತರು. ಇದೇವೇಳೆ ತೇಜಸ್ವಿನಿ ಅನುಪಮಾಗೆ ಸಮಾಧಾನ ಮಾಡಿದರು.
ಇತ್ತ ಜಗನ್ ಕೂಡ ಗಾರ್ಡನ್ ಏರಿಯಾದಲ್ಲಿ ಬೇಸರದಲ್ಲಿ ಕುಳಿತಿದ್ದರು. ಆಶಿತಾ ವಿಷಯ ಹೇಳಿ ಅನುಗೆ ಸಮಾಧಾನ ಮಾಡುವಂತೆ ಕೇಳಿದರು. ಆದರೆ ನಾನು ಬೇರೆ ವಿಷಯಕ್ಕೆ ಬೇಸರವಾಗಿರುವುದಾಗಿ ತಿಳಿಸಿದ ಜಗನ್, ಅವಳೇ ನನ್ನನ್ನು ಅವಾಯ್ಡ್ ಮಾಡ್ತಿದ್ದಾಳೆ. ನಾನೇಕೆ ಸಮಾಧಾನ ಮಾಡಲಿ ಎಂದರು. ಕಡೆಗೆ ಅನುಪಮಾಗೆ ಹುಷಾರಿಲ್ಲ ಎಂದು ಆಶಿತಾ ಹೇಳಿದಾಗ, ಓಆರ್ ಎಸ್ ತರಿಸಿಕೊಡುವಂತೆ ಹೇಳಿ ಜಗನ್ ಸಿಟ್ಟಾದರು.
ಕೊನೆಗೂ ಬಂದ ಜಗನ್, ಅನುಪಮಾಗೆ ಸಮಾಧಾನ ಮಾಡಿದರು. ನೀನೆ ನನ್ನ ವಿಷಯದಲ್ಲಿ ತಪ್ಪು ಮಾಡಿದ್ದು, ಅಂದು ಸರಿಯಿದ್ದರೆ ಇವತ್ತು ಅಳುವ ಪರಿಸ್ಥಿತಿ ಬರ್ತಿರಲಿಲ್ಲ. ಇನ್ನು ಮುಂದೆ ಮನೆಯಲ್ಲಿ ಚೆನ್ನಾಗಿ ಆಡು ಎಂದು ಹೇಳಿ ಹೊರಟು ಹೋದರು.