ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿ ಧಾರವಾಹಿ ಹಿಟ್ ಆದ ಬಳಿಕ ಕನ್ನಡದ ಎಲ್ಲಾ ಚಾನೆಲ್ ಗಳೂ ಪೌರಾಣಿಕ ಧಾರವಾಹಿಗಳತ್ತ ಚಿತ್ತ ಹರಿಸಿದ್ದಾರೆ.
ಕಲರ್ಸ್ ವಾಹಿನಿಯಲ್ಲೇ ಸದ್ಯಕ್ಕೆ ಎರಡು ಪೌರಾಣಿಕ ಧಾರವಾಹಿ ಬರುತ್ತಿದೆ. ಜೀ ಕನ್ನಡದಲ್ಲಿ ಇತ್ತೀಚೆಗೆ ಉಘೇ ಮಹದೇಶ್ವರ ಆರಂಭವಾಗಿದ್ದು, ಶ್ರೀಮನ್ನಾರಯಣ ಸದ್ಯದಲ್ಲೇ ಪ್ರಾರಂಭವಾಗಲಿದೆ. ಸುವರ್ಣ ವಾಹಿನಿಯಲ್ಲೂ ಈ ಹಿಂದೆ ಮೂಡಿ ಬರುತ್ತಿದ್ದ ಮಹದೇವ ಮರೆಯುವಂತಿಲ್ಲ.
ಇದೀಗ ಉದಯ ಟಿವಿ ಸರದಿ. ಅಕ್ಟೋಬರ್ 8 ರಿಂದ ಉದಯ ವಾಹಿನಿಯಲ್ಲಿ ಆಂಜನೇಯನ ಕುರಿತಾದ ‘ಜೈ ಹನುಮಾನ್’ ಧಾರವಾಹಿ ಮೂಡಿಬರಲಿದೆ. ಇದು ಹೆಸರೇ ಹೇಳುವಂತೆ ಆಂಜನೇಯನ ಕತೆ. ಮುಂಬೈ ಮೂಲದ ಕ್ಯಾಂಟಿಲೋ ಸಂಸ್ಥೆ ಇದನ್ನು ನಿರ್ಮಿಸುತ್ತಿದೆ.
ಬುಕ್ಕಾಪಟ್ಟಣ ವಾಸು ಈ ಧಾರವಾಹಿಯ ನಿರ್ದೇಶಕರು. ಬಾಲ ಹನುಮಾನ್ ಪಾತ್ರವನ್ನು ಪ್ರದ್ಯುಮ್ನ ನಿರ್ವಹಿಸುತ್ತಿದ್ದು, ಪ್ರಿಯಾಂಕ ಚಿಂಚೋಳಿ ಅಂಜನಾದೇವಿ ಪಾತ್ರವಹಿಸುತ್ತಿದ್ದಾರೆ. ಪೌರಾಣಿಕ ಧಾರವಾಹಿ ಪ್ರಿಯರು ಅಕ್ಟೋಬರ್ 8 ರಿಂದ ಪ್ರತೀ ರಾತ್ರಿ 7.30 ಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಈ ಧಾರವಾಹಿ ವೀಕ್ಷಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.