ದಿಡೀರ್ ಆಗಿ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಿಂದ ಹೊರಬಂದ ನಟಿ ಉಮಾಶ್ರೀ

ಶನಿವಾರ, 14 ಮಾರ್ಚ್ 2020 (09:05 IST)
ಬೆಂಗಳೂರು: ಹಿರಿಯ ನಟಿ ಉಮಾಶ್ರೀ ಹಲವು ದಿನಗಳ ನಂತರ ಹೊಸ ರೂಪದಲ್ಲಿ ಕಿರುತೆರೆಗೆ ಬಂದಿದ್ದರು. ಅದೂ ಇದೇ ಮೊದಲ ಬಾರಿಗೆ ನಿರೂಪಕರಾಗುವ ಮೂಲಕ. ಆದರೆ ಇದೀಗ ದಿಡೀರ್ ಆಗಿ ಕಾರ್ಯಕ್ರಮದಿಂದ ಹೊರಬಂದಿದ್ದಾರೆ.


ಉದಯ ಟಿವಿಯ ಜನಪ್ರಿಯ ಕಾರ್ಯಕ್ರಮ ‘ಚಿಣ್ಣರ ಚಿಲಿಪಿಲಿ’ ಗೆ ನಿರೂಪಕರಾಗುವ ಮೂಲಕ ಉಮಾಶ್ರೀ ಇದೇ ಮೊದಲ ಬಾರಿಗೆ ನಿರೂಪಣೆಗಿಳಿದಿದ್ದರು. ಆದರೆ ಈ ಮೊದಲು ಈ ಕಾರ್ಯಕ್ರಮವನ್ನು ನಿರೂಪಕಿ ಶಾಲಿನಿ ನಿರ್ವಹಿಸುತ್ತಿದ್ದರು. ಆಗ ಆ ಕಾರ್ಯಕ್ರಮ ಜನಪ್ರಿಯವಾಗಿತ್ತು.

ಆದರೆ ಉಮಾಶ್ರೀ ಎರಡನೇ ಸೀಸನ್ ಗೆ ನಿರೂಪಕರಾಗಿ ಬಂದಾಗ ಪ್ರೇಕ್ಷಕರು ಅವರನ್ನು ಆ ರೂಪದಲ್ಲಿ ಸ್ವೀಕರಿಸಲಿಲ್ಲ. ಉಮಾಶ್ರೀಗೆ ಇದು ಸೂಟ್ ಆಗುತ್ತಿಲ್ಲ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಲೇ ಇದ್ದರು. ಇದೀಗ ಉಮಾಶ್ರೀ ಕಾರ್ಯಕ್ರಮದಿಂದ ಹೊರಬಂದಿದ್ದು, ಮತ್ತೆ ಶಾಲಿನಿಯೇ ಈ ಕಾರ್ಯಕ್ರಮವನ್ನು ನಿರೂಪಿಸಲಿರುವುದಾಗಿ ವಾಹಿನಿ ಪ್ರಕಟಣೆ ನೀಡಿದೆ. ಆ ಮೂಲಕ ಮತ್ತೆ ಶಾಲಿನಿಯೇ ಚಿಣ್ಣರನ್ನು ಮಾತನಾಡಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ