ವಿಜಯ್ ಸೂರ್ಯಗೆ ಸಿಕ್ಕ ಹೊಸ ಹುಡುಗಿ ಯಾರು ಗೊತ್ತೇ?

ಶುಕ್ರವಾರ, 28 ಜೂನ್ 2019 (09:51 IST)
ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರಬಂದ ವಿಜಯ್ ಸೂರ್ಯ ಈಗ ಸುವರ್ಣ ವಾಹಿನಿಗಾಗಿ ಪ್ರೇಮಲೋಕ ಎನ್ನುವ ಧಾರವಾಹಿಯಲ್ಲಿ ನಾಯಕರಾಗುತ್ತಿದ್ದಾರೆ.


ಆದರೆ ಅಗ್ನಿಸಾಕ್ಷಿಯಲ್ಲಿ ವಿಜಯ್ ಸೂರ್ಯಗೆ ಜೋಡಿಯಾಗಿದ್ದ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ನಿಜ ಜೀವನದಲ್ಲೂ ಒಂದಾಗಬೇಕೆಂದು ಅಭಿಮಾನಿಗಳು ಬಯಸಿದ್ದರು. ಆದರೆ ಅದು ನೆರವೇರಲಿಲ್ಲ.

ಈಗ ಹೊಸ ಧಾರವಾಹಿಯಲ್ಲಿ ವಿಜಯ್ ಗೆ ಹೊಸ ನಾಯಕಿ ಸಿಕ್ಕಿದ್ದಾರೆ. ಅಂಕಿತಾ ನವ್ಯಾ ಗೌಡ ಎಂಬ ಹೊಸ ಹುಡುಗಿ ವಿಜಯ್ ಗೆ ನಾಯಕಿಯಾಗುತ್ತಿದ್ದಾರೆ. ಈಕೆಗೆ ಇದು ಮೊದಲ ಧಾರವಾಹಿ. ಸನ್ನಿಧಿ-ಸಿದ್ಧಾರ್ಥ್ ಮಾಡಿದ ಮೋಡಿಯೇ ಈ ಜೋಡಿಯೂ ಮಾಡುತ್ತಾ ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ