ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ತೆರೆ

ಮಂಗಳವಾರ, 6 ಜೂನ್ 2023 (16:42 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈ ವಾರವೇ ಕೊನೆಯಾಗಲಿದೆ.

ಈ ವಾರ ಕಾಂಗ್ರೆಸ್ ನಾಯಕ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಜೀವನ ಕತೆಯನ್ನು ಪ್ರೇಕ್ಷಕರ ಮುಂದೆ ಬಿಚ್ಚಿಡಲಿದ್ದಾರೆ. ಡಿಕೆಶಿ ಈ ಶೋನ 100 ನೇ ಸಾಧಕರಾಗಿದ್ದಾರೆ.

ಇದರೊಂದಿಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ 5 ನೇ ಸೀಸನ್ ಮುಕ್ತಾಯವಾಗಲಿದೆ. 100 ನೇ ಸಾಧಕರು ತುಂಬಾ ವಿಶೇಷ ವ್ಯಕ್ತಿಯಾಗಿರುತ್ತಾರೆ ಎಂದು ಈ ಮೊದಲು ಕಾರ್ಯಕ್ರಮದ ಆರಂಭದಲ್ಲಿ ನಿರೂಪಕರ ರಮೇಶ್ ಅರವಿಂದ್ ಹೇಳಿದ್ದರು. ಅದರಂತೆ ಡಿಕೆಶಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಈ ವಾರಂತ್ಯಕ್ಕೆ  ಈ ಎಪಿಸೋಡ್ ಗಳು ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ