ಈ ವಾರ ವೀಕೆಂಡ್ ವಿತ್ ರಮೇಶ್ ನಲ್ಲಿ ಡಿಕೆಶಿ

ಸೋಮವಾರ, 5 ಜೂನ್ 2023 (16:24 IST)
Photo Courtesy: Twitter
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಈ ವಾರ ಉಪಮುಖ್ಯಮಂತ್ರಿ, ಕಾಂಗ್ರೆಸ್ ನ ಪ್ರಮುಖ ನಾಯಕ ಡಿಕೆ ಶಿವಕುಮಾರ್ ಅತಿಥಿಯಾಗಿದ್ದಾರೆ.
 
ಈ ಬಗ್ಗೆ ಈಗ ವಾಹಿನಿಯೇ ಅಧಿಕೃತವಾಗಿ ಪ್ರೋಮೋ ಹರಿಯಬಿಟ್ಟಿದೆ. ಡಿಕೆಶಿ ಕಳೆದ ವಾರವೇ ಶೋನಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಪೂರ್ವನಿರ್ಧರಿತ ಕಾರ್ಯಕ್ರಮಗಳಿಂದಾಗಿ ಚಿತ್ರೀಕರಣ ಸಾಧ‍್ಯವಾಗಿರಲಿಲ್ಲ.

ಹೀಗಾಗಿ ಕಳೆದ ವಾರ ಶೋ ರದ್ದಾಗಿತ್ತು. ಆದರೆ ಈಗ ಡಿಕೆಶಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಇದೇ ವಾರದ ಅಂತ್ಯಕ್ಕೆ ಡಿಕೆಶಿ ಭಾಗಿಯಾಗಿರುವ ಎಪಿಸೋಡ್ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ