ಬೆಂಗಳೂರು : ರಾಜ್ಯದಲ್ಲಿ ಹೆಚ್3ಎನ್2 ವೈರಸ್ ಆತಂಕ ಹೆಚ್ಚಾಗಿದೆ. ಕಳೆದ 82 ದಿನಗಳಲ್ಲಿ ಬರೋಬ್ಬರಿ 115 ಪ್ರಕರಣಗಳು ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಸೈಲೆಂಟ್ ವೈರಸ್ ಡೆಡ್ಲಿ ಅಟ್ಯಾಕ್ ಮಾಡಲಿದೆ ಎನ್ನುವ ಭೀತಿ ಕಾಡುತ್ತಿದೆ.
ಕೊರೊನಾ ಬಳಿಕ ಮತ್ತೆ ಹೆಚ್3ಎನ್2 ಎಂಬ ಹೊಸ ವೈರಸ್ ಜನರನ್ನು ನಡುಗಿಸುತ್ತಿದೆ. ಅತಿಯಾದ ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆಯ ಲಕ್ಷಣಗಳನ್ನು ಹೊಂದಿರುವ ಈ ವೈರಸ್ ರಾಜ್ಯದ 21 ಜಿಲ್ಲೆಗಳಲ್ಲಿ ಸದ್ದಿಲ್ಲದೆ ಹರಡಿದೆ. ಬೆಂಗಳೂರು ಸೇರಿ ರಾಜ್ಯದ 21 ಜಿಲ್ಲೆಗಳಲ್ಲಿ ಕೇವಲ 82 ದಿನಗಳಲ್ಲಿ ಬರೋಬ್ಬರಿ 115 ಪ್ರಕರಣಗಳು ದಾಖಲಾಗಿವೆ.
ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಬೆಂಗಳೂರು ಒಂದರಲ್ಲೇ 30 ಪ್ರಕರಣಗಳು ದಾಖಲಾಗಿವೆ. ನಗರದ ಮೂಲೆ ಮೂಲೆಗೂ ಈ ವೈರಸ್ ಹರಡಬಹುದೆಂಬ ಆತಂಕವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಸೈಲೆಂಟ್ ಆಗಿಯೇ ಹರಡುತ್ತಿರುವ ಈ ವೈರಸ್ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎನ್ನುತ್ತಿದ್ದಾರೆ.