ಒಂದೇ ವಾರದಲ್ಲಿ 2,000 ರೂ. ನೋಟುಗಳ 14,000 ಕೋಟಿ ಡೆಪಾಸಿಟ್ : ಆರ್‌ಬಿಐ

ಗುರುವಾರ, 1 ಜೂನ್ 2023 (07:21 IST)
ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ಮೇ 19 ರಂದು 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.

ಇದಾದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇದುವರೆಗೆ ಅಂದಾಜು 17,000 ಕೋಟಿ ರೂ. ಮೌಲ್ಯದ 2,000 ರೂ.ಯ ನೋಟುಗಳನ್ನು ಠೇವಣಿ ಹಾಗೂ ವಿನಿಮಯ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಆರ್ಬಿಐ ಮೇ 19 ರಂದು ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿತು. ಸಾರ್ವಜನಿಕರು 2,000 ರೂ.ಯ ನೋಟುಗಳನ್ನು ತಮ್ಮ ಖಾತೆಗಳಲ್ಲಿ ಠೇವಣಿ ಇಡಲು ಹಾಗೂ ಎಕ್ಸ್ಚೇಂಜ್ ಮಾಡಿಕೊಳ್ಳಲು ಮೇ 23 ರಿಂದ ಅನುಮತಿ ನೀಡಿದ್ದು, ಸೆಪ್ಟೆಂಬರ್ 30ರ ವರೆಗೆ ಕಾಲಾವಕಾಶ ನೀಡಿದೆ.

ನೋಟುಗಳನ್ನು ಬದಲಿಸಿಕೊಳ್ಳಲು ಅನುಮತಿ ನೀಡಿದ ವಾರದ ಬಳಿಕ ಮಂಗಳವಾರ ಮಾಹಿತಿ ನೀಡಿರುವ ಎಸ್ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ, ತಮ್ಮ ಬ್ಯಾಂಕ್ನಲ್ಲಿ ಇಲ್ಲಿಯವರೆಗೆ ಸುಮಾರು 14,000 ಕೋಟಿ ರೂ. ಮೌಲ್ಯದ 2,000 ರೂ.ಯ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಲಾಗಿದೆ. ಸುಮಾರು 3,000 ಕೋಟಿ ರೂ. ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಳ್ಳಲಾಗಿದೆ. ಇದು ಮಾರುಕಟ್ಟೆಯಲ್ಲಿರುವ ಸುಮಾರು 20% ದಷ್ಟು ನೋಟುಗಳು ಈಗ ನಮ್ಮಲ್ಲಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ