ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಶುಕ್ರವಾರ ತನ್ನ ರೆಪೊ ದರವನ್ನು ಶೇ.0.50 ರಷ್ಟು ಹೆಚ್ಚಿಸಿದೆ.
ಈ ಮೂಲಕ ರೆಪೊ ದರ ಶೇ.5.40 ರಷ್ಟು ಹೆಚ್ಚಳವಾಗಿದೆ. ಏರುತ್ತಿರುವ ಹಣದುಬ್ಬರವನ್ನು ಸರಿಪಡಿಸಲು ಆರ್ಬಿಐ ಸತತ 3ನೇ ಬಾರಿ ರೆಪೊ ದರವನ್ನು ಹೆಚ್ಚಿಸಿದೆ.
ರೆಪೊ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಇದರಿಂದ ಗೃಹ, ವಾಹನ ಹಾಗೂ ಇರತ ಸಾಲಗಳ ಮೇಲಿನ ಬಡ್ಡಿ ದರ ಇನ್ನಷ್ಟು ಜಾಸ್ತಿಯಾಗಲಿದೆ.
ಆರ್ಬಿಐ ರೆಪೊ ದರವನ್ನು ಮೇ ತಿಂಗಳಿನಲ್ಲಿ ಶೇ.0.40 ರಷ್ಟು ಹಾಗೂ ಜೂನ್ನಲ್ಲಿ ಶೇ.0.50 ರಷ್ಟು ಹೆಚ್ಚಿಸಿತ್ತು. ಇದೀಗ ಸತತ 3ನೇ ಬಾರಿ ಹೆಚ್ಚಿಸಿದ್ದು, ಈ ದರ 2019ರಿಂದ ನಡೆದ ಮೊದಲ ಅತಿದೊಡ್ಡ ಏರಿಕೆಯಾಗಿದೆ.