ನೋಟು ಮುದ್ರಣ ಘಟಕದಿಂದ 5 ಲಕ್ಷ ರೂಪಾಯಿ ನಾಪತ್ತೆ!

ಬುಧವಾರ, 14 ಜುಲೈ 2021 (20:15 IST)
ನಾಸಿಕ್(ಜು.14):  ಗರಿಷ್ಠ ಭದ್ರತೆ, ಹೆಜ್ಜೆ ಹೆಜ್ಜೆಗೂ ಸಿಸಿಟಿವಿ, ಸಿಬ್ಬಂದಿಗಳನ್ನು ಹೊರತು ಪಡಿಸಿ ಇನ್ಯಾರಿಗೂ ಪ್ರವೇಶವಿಲ್ಲ. ಇಂತಹ ಹೈ ಲೆವೆಲ್ ಸೆಕ್ಯೂರಿಟಿ ಇದ್ದರೂ ನಾಸಿಕ್ನಲ್ಲಿರುವ ಸರ್ಕಾರದ ನೋಟು ಮುದ್ರಣ ಘಟಕದಿಂದ 5 ಲಕ್ಷ ರೂಪಾಯಿ ನಾಪತ್ತೆಯಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಲಾವಣೆಯಲ್ಲಿರುವ ನಗದು 5 ಲಕ್ಷ ಕೋಟಿ ರುಪಾಯಿಯಷ್ಟು ಏರಿಕೆ
•             ಗರಿಷ್ಠ ಭದ್ರತೆಯ ಸರ್ಕಾರದ ನೋಟು ಮುದ್ರಣ ಘಟಕದಲ್ಲೇ ಕಳ್ಳತನ
•             5 ಲಕ್ಷ ರೂಪಾಯಿ ನಾಪತ್ತೆ, ಮುದ್ರಣ ಘಟಕದ ಸಿಬ್ಬಂದಿಗಳ ಕೃತ್ಯ ಶಂಕೆ
•             ದೂರು ದಾಖಲು, ಆಂತರಿಕ ತನಿಖೆ ಜೊತೆಗೆ ಪೊಲೀಸ್ ತನಿಖೆ

 
ಇತ್ತೀಚೆಗೆ ನಾಸಿಕ್ ಘಟಕದಲ್ಲಿ ಸರ್ಕಾರದ ನಿಯಮದ ಪ್ರಕಾರ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿತ್ತು.  ಆದರೆ ಮುದ್ರಿತ ನೋಟುಗಳ ಪೈಕಿ 1,000 ನೋಟುಗಳು ಕಾಣೆಯಾಗಿದೆ. ಮುದ್ರಣ ಘಟಕದಿಂದ ನೋಟು ಕಳ್ಳತನ ಅಸಾಧ್ಯದ ಮಾತಾಗಿತ್ತು. ಆದರೆ ಇದೀಗ  ಈ ಘಟನೆ ನಡೆದುಹೋಗಿದೆ.
ಭಾರತದ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ವಿನಿಮಯ WazirXಗೆ ಇಡಿ ಶೋಕಾಸ್ ನೋಟಿಸ್
ಹೊರಗಿನಿಂದ ಯಾರಿಗೂ ಪ್ರವೇಶ ಇಲ್ಲದ ಕಾರಣ ಈ ಕೃತ್ಯವನ್ನು ಸಿಬ್ಬಂದಿಗಳೇ ಮಾಡಿರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಾಸಿಕ್ ನೋಟು ಮುದ್ರಣ ಘಟಕದ ಅಧಿಕಾರಿಗಳು ಆಂತರಿಕ ತನಿಖೆ ನಡೆಸಲಾಗುತ್ತಿದೆ. ಇದರ ಜೊತೆಗೆ ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 381  ಅಡಿಯಲ್ಲಿ FIR ದಾಖಲಿಸಲಾಗಿದೆ.  ತನಿಖೆಯಲ್ಲಿ ಕೆಲ ಮಾಹಿತಿಗಳನ್ನು ಕೆಲ ಹಾಕಲಾಗಿದೆ ಎಂದು  ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅನಿಲ್ ಶಿಂಧೆ  ಹೇಳಿದ್ದಾರೆ

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ