ಮತ್ತೆ ಡೆಡ್ಲಿ ವೈರಸ್ ಪತ್ತೆ! ಜನರೇ ಎಚ್ಚರ

ಮಂಗಳವಾರ, 23 ಆಗಸ್ಟ್ 2022 (08:36 IST)
ವಾಷಿಂಗ್ಟನ್: ಕೆರೆ, ಕೊಳ್ಳ ಹಾಗೂ ನದಿಗಳಲ್ಲಿ ಸ್ನಾನ ಮಾಡುವ ಮುನ್ನ ಜನರು ಎಚ್ಚರ ವಹಿಸಬೇಕಾಗಿದೆ.

ಏಕೆಂದರೆ ಅಪರೂಪದ ಅಮೀಬಾ ಡೆಡ್ಲಿ ವೈರಸ್ ಅಮೆರಿಕದಲ್ಲಿ ಪತ್ತೆಯಾಗಿದ್ದು, ಇದು ನೇರವಾಗಿ ಮೆದುಳು ನಾಶಗೊಳಿಸುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನದಿಗೆ ಸ್ನಾನ ಮಾಡಲು ಹೋಗಿದ್ದ ಬಾಲಕನ ದೇಹಕ್ಕೆ `ಅಮೀಬಾ’ ಹೆಸರಿನ ವೈರಸ್ ಸೇರಿದ್ದು ಬಾಲಕ ಮೃತಪಟ್ಟಿರುವ ಪೂರ್ವ ಅಮೆರಿಕದಲ್ಲಿ ನಡೆದಿದೆ.

ಪೂರ್ವ ಅಮೆರಿಕದ ಅಮೆರಿಕದ ನೆಬ್ರಸ್ಕಾದ ಎಲ್ಖೋರ್ನ್ ನದಿಯಲ್ಲಿ ಬಾಲಕ ಸ್ನಾನ ಮಾಡಲು ಹೋದಾಗ ವೈರಸ್ ದೇಹ ಸೇರಿದೆ. 

ಬಾಲಕನು ಆಗಸ್ಟ್ 8 ರಂದು ಈ ನದಿಯಲ್ಲಿ ಈಜುತ್ತಿದ್ದನು. ನಂತರ ಸ್ನಾನ ಮಾಡುತ್ತಿರುವಾಗ ಅಮೀಬಾ ವೈರಸ್ ದೇಹ ಪ್ರವೇಶಿಸಿದೆ. 5 ದಿನಗಳ ನಂತರ ರೋಗ ಲಕ್ಷಣಗಳು ಕಂಡುಬಂದಿದೆ. ರೋಗಲಕ್ಷಣಗಳು ಕಾಣಿಸಿಕೊಂಡ 48 ಗಂಟೆಗಳ ಬಳಿಕ ಪೋಷಕರು ಆಸ್ಪತ್ರೆಗೆ ಕರೆತಂದಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ದಾಖಲಾದ 10 ದಿನಗಳ ನಂತರ ಬಾಲಕ ಮೃತಪಟ್ಟಿದ್ದಾನೆ ಎಂದು ಯುಎಸ್ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ