ಮುಂಬೈ : ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಜನರು ಆಧಾರ್ ಕಾರ್ಡ್ ವಿವರವನ್ನು ಒದಗಿಸಬೇಕಾಗುತ್ತದೆ ಎಂದು ಮುಂಬೈ ಮೇಯರ್ ಕಿಶೋರ್ ಪೆಡ್ನೇಕರ್ ಶನಿವಾರ ತಿಳಿಸಿದ್ದಾರೆ.
ದಾಖಲೆಗಳನ್ನು ನಿರ್ವಹಿಸುವ ಉದ್ದೇಶದಿಂದ ಆನ್ಲೈನ್ನಲ್ಲಿ ಅಪ್ಡೇಟ್ ಮಾಡಲು ಯಾರಿಗಾದರೂ ಕೋವಿಡ್-19 ಪಾಸಿಟಿವ್ ಬಂದರೆ ಈ ಕುರಿತ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂದಿದ್ದಾರೆ.
ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸುವ ಪ್ರತಿಯೊಬ್ಬರು ಕೋವಿಡ್ ವರದಿ ಏನು ಬಂದಿರುತ್ತದೆ ಎಂಬುವುದನ್ನು ಅಧಿಕಾರಿಗಳಿಗೆ ತಿಳಿಸಬೇಕು.
ಐಸಿಎಂಆರ್ ಇದುವರೆಗೂ ಏಳು ಕೋವಿಡ್ ಸ್ವಯಂ ಪರೀಕ್ಷೆ ಕಿಟ್ಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರಲ್ಲಿ ಮೈಲ್ಯಾಬ್ನಿಂದ ಕೋವಿಸೆಲ್ಫ್ ಮತ್ತು ಮೆರಿಲ್ ಡಯಾಗ್ನೋಸ್ಟಿಕ್ಸ್ನ ಕೋವಿಫೈಂಡ್ ಸೇರಿದಂತೆ ಇನ್ನೂ ಹಲವಾರು ಇದೆ.
ಬಿಎಂಸಿ ತನ್ನ ಸ್ಥಳೀಯ ವಾರ್ಡ್ ವಾರ್ ರೂಮ್ಗಳು ಕೋವಿಡ್ ಸ್ವಯಂ ಪರೀಕ್ಷೆ ಕಿಟ್ಗಳನ್ನು ಖರೀದಿಸಿದವರ ಟೆಸ್ಟ್ ವರದಿಗಳನ್ನು ಪಡೆಯಲು ಅವರನ್ನು ಸಂಪರ್ಕಿಸುತ್ತದೆ.