ಹೆಚ್.ಡಿ.ಕುಮಾರಸ್ವಾಮಿಗಾಗಿ ಹರಕೆ ಹೊತ್ತ ಅಭಿಮಾನಿಗೆ ಧನ್ಯವಾದ ಸಲ್ಲಿಸಿದ ನಟ ನಿಖಿಲ್ ಕುಮಾರಸ್ವಾಮಿ

ಶನಿವಾರ, 26 ಮೇ 2018 (06:55 IST)
ಬೆಂಗಳೂರು : ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗುವಂತೆ ಹರಕೆ ಕಟ್ಟಿಕೊಂಡ ಅಭಿಮಾನಿಯೊಬ್ಬರಿಗೆ ಅವರ ಮಗ ನಟ ನಿಖಿಲ್ ಕುಮಾರಸ್ವಾಮಿ ಅವರು ಧನ್ಯವಾದ ತಿಳಿಸಿದ್ದಾರೆ.


 ಮೈಸೂರಿನ ಕೆ.ಆರ್.ನಗರ ತಾಲ್ಲೂಕಿನ ಮೇಲೂರು ಗ್ರಾಮದ ನಿವಾಸಿಯಾಗಿರುವ ರಾಮಕೃಷ್ಣಗೌಡ  ಎಂಬುವವರು ಹೆಚ್.ಡಿ.ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿಯಾಗಿದ್ದು, ಕುಮಾರಸ್ವಾಮಿ ಮತ್ತೆ ಸಿಎಂ ಆಗುವವರೆಗೂ ತಲೆಕೂದಲು ಮತ್ತು ಗಡ್ಡ ತೆಗಿಸಲ್ಲಎಂದು 11 ವರ್ಷದಿಂದ ಹರಕೆ ಕಟ್ಟಿದ್ದರು.


ಈ ವಿಚಾರ ತಿಳಿದ ನಟ ನಿಖಿಲ್ ಕುಮಾರಸ್ವಾಮಿ ಅವರು ರಾಮಕೃಷ್ಣಗೌಡ ಹಾಗೂ ಅವರ ಪುತ್ರ ಗೌತಮ್ ಅವರನ್ನು ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ತಂದೆಯವರಿಗೆ ಹರಕೆ ಹೊತ್ತಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಹಾಗೇ ಮುಂದಿನ ದಿನಗಳಲ್ಲಿ ತಂದೆಯವರನ್ನ ಭೇಟಿ ಮಾಡಿಸುವುದಾಗಿ ನಿಖಿಲ್ ಭರವಸೆ ನೀಡಿದ್ದಾರೆ. ಇದೀಗ ರಾಮಕೃಷ್ಣಗೌಡರು ಕಾಶಿಗೆ ತೆರಳಿದ್ದು, ಸಿಎಂ ಕುಮಾರಸ್ವಾಮಿ ಅವರಿಗಾಗಿ ಹೊತ್ತಿದ್ದ ಹರಕೆಗೆ ಮುಡಿ ಮಾಡಿಸಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ