ಲಕ್ನೋ : ಉತ್ತರಪ್ರದೇಶದ ಫತೇಪುರ್ ವ್ಯಕ್ತಿಯೊಬ್ಬರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಕಾನ್ಪುರದ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ 10 ದಿನಗಳಿಂದಲೂ ಈತ ತಲೆನೋವು, ಕೆಮ್ಮು, ನೆಗಡಿ, ಜ್ವರ ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದನು. ತಪಾಸಣೆಗೆ ಒಳಪಡಿಸಿದಾಗ ಆಫ್ರಿಕನ್ ಹಂದಿಜ್ವರ ಇರುವುದು ಪತ್ತೆಯಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅಲೋಕ್ ರಂಜನ್ ತಿಳಿಸಿದ್ದಾರೆ.
ಸದ್ಯ ಸೋಂಕು ವರದಿಯಾದ ವ್ಯಕ್ತಿ ಮತ್ತು ಆತನ ಕುಟುಂಬವನ್ನು ಪ್ರತ್ಯೇಕಿಸಲಾಗಿದ್ದು, ಹೊರಗೆ ತಿರುಗಾಡದಂತೆ ಸೂಚಿಸಿದ್ದಾರೆ.