ಬೆಳಗಾವಿ ಬಳಿಕ ಬಳ್ಳಾರಿ ಕಾಂಗ್ರೆಸ್ ನಲ್ಲಿ ಶುರುವಾಯ್ತು ಬಂಡಾಯ ಭೀತಿ
ಬುಧವಾರ, 19 ಸೆಪ್ಟಂಬರ್ 2018 (09:51 IST)
ಬೆಂಗಳೂರು: ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರಿಂದ ಉಂಟಾಗಿದ್ದ ಬಂಡಾಯದ ಭೀತಿ ಇದೀಗ ಬಳ್ಳಾರಿ ಕಾಂಗ್ರೆಸ್ ಗೂ ವ್ಯಾಪಿಸಿದೆ.
ಶಾಸಕ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ತಮ್ಮ ಬಂಡಾಯ ಶಮನವಾಗಬೇಕೆಂದರೆ ಹಲವು ಬೇಡಿಕೆಗಳ ಪಟ್ಟಿಯನ್ನು ಹೈಕಮಾಂಡ್ ಮುಂದಿಟ್ಟಿದ್ದರು. ಇದರಲ್ಲಿ ಬಳ್ಳಾರಿಯ ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ಇದೆ.
ಇದೀಗ ಬಳ್ಳಾರಿ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಬಳ್ಳಾರಿಯಲ್ಲಿ ಹಿಂದಿನಿಂದಲೂ ಪಕ್ಷಕ್ಕಾಗಿ ದುಡಿದ ನಾಯಕರಿರುವಾಗ ಹೊಸಬರಿಗೆ ಸಚಿವ ಸ್ಥಾನ ನೀಡುವುದೇಕೆ? ಬೆಳಗಾವಿ ಕಾಂಗ್ರೆಸ್ ವಿಚಾರದಲ್ಲಿ ಡಿಕೆ ಶಿವಕುಮಾರ್ ತಲೆ ಹಾಕಬಾರದು ಎನ್ನುವ ಜಾರಕಿಹೊಳಿ ಸಹೋದರರು ಬಳ್ಳಾರಿ ಕಾಂಗ್ರೆಸ್ ನಲ್ಲಿ ಮೂಗು ತೂರಿಸುತ್ತಿರುವುದೇಕೆ ಎಂದು ಇಲ್ಲಿನ ನಾಯಕರಾದ ಭೀಮಾನಾಯ್ಕ್, ಆನಂದ್ ಸಿಂಗ್ ಸೇರಿದಂತೆ ಹಲವು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಅಸಮಾಧಾನದ ಹೊಗೆ ಇನ್ನೆಷ್ಟು ದೊಡ್ಡದಾಗುತ್ತೋ ಅಥವಾ ಅಲ್ಲಿಗೇ ತಣ್ಣಗಾಗುತ್ತಾ ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.