ಕರುಣಾನಿಧಿ ಸಾವಿನ ಬೆನ್ನಲ್ಲೇ ಅಧಿಕಾರಕ್ಕಾಗಿ ಡಿಎಂಕೆಯಲ್ಲಿ ಕಿತ್ತಾಟ?

ಗುರುವಾರ, 9 ಆಗಸ್ಟ್ 2018 (08:54 IST)
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಸಾವನ್ನಪ್ಪಿದ ಬೆನ್ನಲ್ಲೇ ಅವರ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಈಗ ಪುತ್ರರಲ್ಲೇ ಕಿತ್ತಾಟ ನಡೆದಿದೆ ಎನ್ನಲಾಗಿದೆ.

ಕರುಣಾನಿಧಿ ಬದುಕಿದ್ದಾಗ ಸ್ಟಾಲಿನ್ ಅವರೇ ತಮ್ಮ ಉತ್ತರಾಧಿಕಾರಿ ಎಂದು ಬಿಂಬಿಸಿದ್ದರು. ಆದರೆ ಇನ್ನೊಬ್ಬ ಪುತ್ರ ಎಂಕೆ ಅಳಗಿರಿ ಕೂಡಾ ಡಿಎಂಕೆ ಪರಮೋಚ್ಛ ನಾಯಕ ತಾನಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇದರಿಂದಾಗಿ ಇದೀಗ ಡಿಎಂಕೆ ಧುರೀಣನ ಸ್ಥಾನಕ್ಕೆ ಸಹೋದರರಿಬ್ಬರಲ್ಲೇ ಕಲಹ ಶುರುವಾಗಿದೆ ಎನ್ನಲಾಗಿದೆ. ಹಿಂದೆ ಜಯಲಲಿತಾ ತೀರಿಕೊಂಡಾಗಲೂ ಎಐಎಡಿಎಂಕೆಯಲ್ಲೂ ಇದೇ ರೀತಿ ಅಧಿಕಾರಕ್ಕಾಗಿ ಕಿತ್ತಾಟ ನಡೆದು ಪಕ್ಷವೇ ಇಬ್ಬಾಗವಾಯಿತು. ಇದೀಗ ಡಿಎಂಕೆಗೂ ಅದೇ ಗತಿಯಾಗುತ್ತಾ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ