ಪಾಟ್ನಾ : ಕೆಲ ದಿನಗಳ ಹಿಂದೆ ಬಿಹಾರದಲ್ಲಿ ಕಳ್ಳಭಟ್ಟಿ ಸೇವಿಸಿ 70ಕ್ಕೂ ಅಧಿಕ ಜನರು ಸಾವನ್ನಪ್ಪಿ ದೊಡ್ಡ ದುರಂತವೇ ಎನಿಸಿಕೊಂಡಿತ್ತು.
ಇದೀಗ ಮತ್ತೆ ಕಳ್ಳಭಟ್ಟಿ ಸೇವಿಸಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ವರದಿಯಾಗಿದೆ. ಸಿವಾನ್ ಜಿಲ್ಲೆಯ ಬಾಲಾ ಗ್ರಾಮದಲ್ಲಿ ಭಾನುವಾರ ಕಳ್ಳಭಟ್ಟಿ ಸೇವಿಸಿ 3 ಜನರು ಸಾವನ್ನಪ್ಪಿದ್ದರೆ, 6 ಜನರು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಪಾಂಡೆ ಮಧ್ಯರಾತ್ರಿ ಸದರ್ ಆಸ್ಪತ್ರೆಗೆ ತೆರಳಿ ವಿಷಯದ ಬಗ್ಗೆ ವಿಚಾರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 3 ಜನರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ 6 ಜನರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಮೇಲ್ನೋಟಕ್ಕೆ ಕಳ್ಳಭಟ್ಟಿ ಸೇವಿಸಿ ಜನರು ಸಾವಿಗೀಡಾಗಿದ್ದಾರೆ.