ರಾಜ್ಯವನ್ನು ಮೊದಲು ನಿಭಾಯಿಸಿ, ನಂತರ ಮಹಾಘಟಬಂಧನ್ ಮಾತು ಎಂದು ಅಮಿತ್ ಶಾ ಸವಾಲು ಹಾಕಿದ್ದು ಯಾರಿಗೆ?
ಪಶ್ಚಿಮ ಬಂಗಾಲದ ಲೋಕಸಭೆ ಚುನಾವಣೆ ಪೂರ್ವ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾ, ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಮಮತಾ ಬ್ಯಾನರ್ಜಿ ಈಗೀಗ ಮಹಾಘಟಬಂಧನ ಮಾಡಲು ಓಡಾಡುವುದೇ ಜಾಸ್ತಿಯಾಗಿದೆ. ಅವರನ್ನು ರಾಜ್ಯದಲ್ಲಿ ನೋಡುವುದೇ ಅಪರೂಪವಾಗಿದೆ.ಅದೆಲ್ಲಾ ಒಳ್ಳೆಯದೇ. ಆದರೆ ಅವರು ತನ್ನ ರಾಜ್ಯವನ್ನು ಮೊದಲು ನೋಡಿಕೊಳ್ಳಲಿ. ಬಹುಶಃ ಅವರಿಗೆ ಗೊತ್ತಿಲ್ಲ, ದೆಹಲಿಯನ್ನು ಟಾರ್ಗೆಟ್ ಮಾಡುವ ಭರದಲ್ಲಿ ತನ್ನದೇ ರಾಜ್ಯ ಕೈ ತಪ್ಪಿಹೋಗುತ್ತಿದೆ’ ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.