ಜನರಿಗೆ ಮತ್ತೊಂದು ಆತಂಕ?

ಸೋಮವಾರ, 23 ಮೇ 2022 (09:31 IST)
ನವದೆಹಲಿ : ಭಾರತದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಉಪತಳಿ BA.4 ಮತ್ತು BA.5 ತಳಿ ಪತ್ತೆಯಾಗಿದೆ. ತಮಿಳುನಾಡು ಮತ್ತು ತೆಲಂಗಾಣದಲ್ಲಿ ಕೊರೊನಾ ಹೊಸ ತಳಿಗಳು ದೃಢಪಟ್ಟಿವೆ.
 
ಈ ಕುರಿತು INSACOG ಅಧಿಕೃತ ಪ್ರಕಟಣೆ ಹೊರಡಿಸಿದೆ. ತಮಿಳುನಾಡು ಮೂಲದ 19 ವರ್ಷದ ಯುವತಿಯಲ್ಲಿ ಕೊರೊನಾ ರೂಪಾಂತರಿ BA.4 ದೃಢಪಟ್ಟಿದೆ. ತೆಲಂಗಾಣ ಮೂಲದ 80 ವರ್ಷದ ವೃದ್ಧನಲ್ಲಿ BA.5  ಉಪತಳಿ ಪತ್ತೆಯಾಗಿದೆ.

ಇಬ್ಬರು ಸೋಂಕಿತರಲ್ಲಿ ಕೊರೊನಾ ಲಘು ಲಕ್ಷಣಗಳು ವರದಿಯಾಗಿದೆ. BA.4 ಮತ್ತು BA.5 ಓಮಿಕ್ರಾನ್ನ ಉಪತಳಿಗಳಾಗಿದ್ದು, ಹಲವು ದೇಶಗಳಲ್ಲಿ ಪತ್ತೆಯಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ