ಅಪ್ಪಳಿಸಲಿದೆ ಮತ್ತೊಂದು ಸೈಕ್ಲೋನ್!

ಮಂಗಳವಾರ, 23 ನವೆಂಬರ್ 2021 (11:45 IST)
ಬೆಂಗಳೂರು : ಕರ್ನಾಟಕ ರಾಜ್ಯಾದ್ಯಂತ ಕೆಲವೆಡೆ ಸುರಿದ ಮಳೆಯಿಂದ ಜನ ಜೀವನ ತತ್ತರಿಸಿದೆ.
ಸದ್ಯ ಮಳೆ ನಿಂತರೂ ಮರದ ಹನಿ ನಿಲ್ಲದು ಅನ್ನೋಹಾಗೆ ರಾಜ್ಯದಲ್ಲಿ ವರುಣನ ಅಬ್ಬರ ಕಡಿಮೆಯಾಗಿದ್ರು ಕೂಡ ಮಳೆ ಸೃಷ್ಟಿಸಿರುವ ಅವಾಂತರದಿಂದ ಮುಕ್ತಿ ಸಿಕ್ಕಿಲ್ಲ. ಆದ್ರೆ ಮಳೆಯಿಂದ ತತ್ತರಿಸಿರೋ ರಾಜ್ಯಕ್ಕೆ ಈಗ ಮತ್ತೊಂದು ಆಘಾತ ಉಂಟಾಗಿದೆ. ನವೆಂಬರ್ 26ಕ್ಕೆ ಮತ್ತೆ ವರುಣನ ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಸಿಕ್ಕಿದೆ.
ನವೆಂಬರ್ 26ರಿಂದ ಡಿಸೆಂಬರ್ 15ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ತಮಿಳು‌ನಾಡು, ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಲಿದ್ದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೈಕ್ಲೋನ್ ಆಗಿ ಬದಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡು, ಕೇರಳ, ಆಂಧ್ರ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದ್ದು ಪುದುಚೆರಿ, ಚೆನ್ನೈ, ನೆಲ್ಲೂರಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ನೆರೆ ರಾಜ್ಯಗಳಲ್ಲಿ ಮಳೆ ಹಿನ್ನೆಲೆ ನವೆಂಬರ್ 26ರಿಂದ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ