20 ವರ್ಷಗಳಲ್ಲಿ ಬರಲಿದೆ ಇನ್ನೊಂದು ಸಾಂಕ್ರಾಮಿಕ : ಬಿಲ್ ಗೇಟ್ಸ್
ಅವರ ಭವಿಷ್ಯ ನಿಜವೆಂಬಂತೆ ಕೋವಿಡ್-19 ಜಗತ್ತಿನಾದ್ಯಂತ ಹರಡಿತು. ಇದೀಗ ಬಿಲ್ ಗೇಟ್ಸ್ ಇನ್ನೊಂದು ಸಾಂಕ್ರಾಮಿಕ ರೋಗದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬಿಲ್ ಗೇಟ್ಸ್ ವಿಶೇಷ ಸಂದರ್ಶನವೊಂದರಲ್ಲಿ, ಜಗತ್ತು ಮುಂದಿನ 20 ವರ್ಷಗಳಲ್ಲಿ ಇನ್ನೊಂದು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಲಿದೆ ಎಂದಿದ್ದಾರೆ. 20 ವರ್ಷಗಳ ಬಳಿಕ ತಲೆದೋರಲಿರುವ ರೋಗವನ್ನು ಜಗತ್ತು ಎದುರಿಸಲು ಈಗಲೇ ತಯಾರಿ ನಡೆಸಲು ಕರೆ ನೀಡಿದ್ದಾರೆ.
20 ವರ್ಷಗಳಲ್ಲಿ ನಾವು ಇನ್ನೊಂದು ಸಾಂಕ್ರಾಮಿಕ ರೋಗವನ್ನು ಎದುರಿಸುವ ಸಾಧ್ಯತೆ ಇದೆ. ಇದನ್ನು ಹತೋಟಿಗೆ ತರಲು ನಾವು ಸಿದ್ಧರಾಗಿರಬೇಕು.