ಕುಮಾರಸ್ವಾಮಿಯಂತಹ ಟ್ರಾಜಿಡಿ ಕಿಂಗ್ ಭಾರತಕ್ಕೆ ಬೇಡ ಎಂದ ಅರುಣ್ ಜೇಟ್ಲಿ
ಮಂಗಳವಾರ, 17 ಜುಲೈ 2018 (08:44 IST)
ನವದೆಹಲಿ: ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ನಾನು ಸಂತೋಷವಾಗಿಲ್ಲ ಎಂದು ಹೇಳಿಕೆ ನೀಡಿದ್ದ ಕರ್ನಾಟಕ ಸಿಎಂ ಕುಮಾರಸ್ವಾಮಿ ವಿರುದ್ಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಟೀಕಾಪ್ರಹಾರ ನಡೆಸಿದ್ದಾರೆ.
ಭಾರತಕ್ಕೆ ಮೋದಿಯಂತಹ ಕಟಿಬದ್ಧ ನಾಯಕರು ಬೇಕು. ಆದರೆ ಕುಮಾರಸ್ವಾಮಿಯಂತಹ ಟ್ರಾಜಿಡಿ ಕಿಂಗ್ ಗಳ ಅಗತ್ಯವಿಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.
ಕರ್ನಾಟಕದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಜೇಟ್ಲಿ, ಇದು ಅವಕಾಶವಾದಿಗಳ ಕೂಟ ಎಂದು ಜರೆದಿದ್ದಾರೆ. ಸಮ್ಮಿಶ್ರ ಸರ್ಕಾರ ಎನ್ನುವುದು ಅವಕಾಶವಾದಿ ವಿಷವಿದ್ದ ಹಾಗೆ. ಇಂತಹ ವಿಷದ ಬಟ್ಟಲನ್ನು ದೇಶ ರಾಜಕಾರಣದಲ್ಲೂ ಯಾಕೆ ನೋಡಬೇಕು? ಇಂತಹ ನಾಯಕತ್ವದಿಂದ ನಮ್ಮ ದೇಶ ವಿಶ್ವದ ದೃಷ್ಟಿಯಲ್ಲಿ ಕಳಪೆ ಎನಿಸಬಹುದು ಎಂದು ಜೇಟ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.