ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ನಿಜ ಕಾರಣವೇನು ಗೊತ್ತಾ?!
ಸದ್ಯಕ್ಕೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಹಲವು ಸಮಸ್ಯೆಗಳು ಕುಮಾರಸ್ವಾಮಿ ಮುಂದಿದೆ. ಸಾಲಮನ್ನಾ ಘೋಷಣೆ ಮಾಡಿದ ಬಳಿಕ ಅದನ್ನು ಸರಿದೂಗಿಸುವುದೇ ದೊಡ್ಡ ತಲೆನೋವಾಗಿದೆ. ಹಣ ಹೊಂದಿಸುವುದೇ ಕುಮಾರಸ್ವಾಮಿ ಎದುರಿರುವ ದೊಡ್ಡ ಸವಾಲು.
ಅದರ ಜತೆಗೆ ಮಿತ್ರ ಪಕ್ಷ ಕಾಂಗ್ರೆಸ್ ನಾಯಕರೇ ಬಜೆಟ್ ನ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಕುಮಾರಸ್ವಾಮಿಗೆ ತಲೆನೋವಾಗಿದೆ. ಹೀಗಾಗಿ ಸಿಎಂ ಆದರೂ ಅಧಿಕಾರವಿಲ್ಲದ ಸ್ಥಿತಿ ಕುಮಾರಸ್ವಾಮಿಯವರದ್ದಾಗಿದೆ. ಇದೇ ಅಸಹಾಯಕತೆಯೇ ಅವರನ್ನು ಕಣ್ಣೀರು ಹಾಕುವಂತೆ ಮಾಡಿತಾ ಎಂಬ ಪ್ರಶ್ನೆ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ.