ಭಾರತದಲ್ಲಿ ಕೋವಿಡ್ಗೆ ಬಲಿಯಾದವರೆಷ್ಟು?

ಶನಿವಾರ, 7 ಮೇ 2022 (08:55 IST)
ನವದೆಹಲಿ : ದೇಶದಲ್ಲಿ ಕೋವಿಡ್ ಮಾರಿಗೆ ಬಲಿಯಾದವರ ಸಂಖ್ಯೆ ಬಗ್ಗೆ ಆರಂಭದಿಂದಲೂ ಗೊಂದಲ ಇದೆ. ಕೇಂದ್ರ ಸರ್ಕಾರ 4.80 ಲಕ್ಷ ಮಂದಿ ಎನ್ನುತ್ತಿದೆ.

ವಿಶ್ವಸಂಸ್ಥೆಯ ವರದಿ ಮಾತ್ರ 47 ಲಕ್ಷ ಎನ್ನುತ್ತಿದೆ. ಆದರೆ ಸರ್ಕಾರ ಇದನ್ನು ಅಲ್ಲಗಳೆಯುತ್ತಿದೆ. ನಾವು ವಿಶ್ವಸಂಸ್ಥೆಗೆ ಕೋವಿಡ್ ಅಂಕಿ ಅಂಶ ನೀಡಿದ್ದೇವೆ. ಹೆಚ್ಚುವರಿ ಮಾಹಿತಿ ನೀಡುವ ಮುನ್ನ ನಾವು ನೀಡಿದ ಮಾಹಿತಿ ವಿಶ್ಲೇಷಿಸಿ.

ಭಾರತದ ಕೋವಿಡ್ ವಿಚಾರದಲ್ಲಿ ವಿಶ್ವಸಂಸ್ಥೆ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರತಿಭಟನೆ ದಾಖಲಿಸಿದೆ.

ವಿಶ್ವಸಂಸ್ಥೆ ಅನುಸರಿಸ್ತಿರುವ ಗಣಿತ ವಿಧಾನಗಳ ಬಗ್ಗೆ ಭಾರತ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಆದ್ರೇ, ಈ ಆಕ್ಷೇಪವನ್ನು ಪರಿಗಣಿಸದೇ ಈ ಅಂದಾಜು ಅಂಕಿಸಂಖ್ಯೆಗಳನ್ನು ಹೇಗೆ ಬಿಡುಗಡೆ ಮಾಡಿದ್ರಿ ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಮಾತ್ರ ಈ ವಿಚಾರದಲ್ಲಿ ಮತ್ತೆ ಕೇಂದ್ರದ ಮೇಲೆ ಮುಗಿಬಿದ್ದಿದೆ. ರಾಹುಲ್ ಗಾಂಧಿ ಟ್ವೀಟ್ ಮಾಡಿ, ವಿಜ್ಞಾನ ಮತ್ತು ಗಣಿತದ ಅಂಕಿ ಸಂಖ್ಯೆಗಳು ಎಂದಿಗೂ ಸುಳ್ಳು ಹೇಳಲ್ಲ. ಆದರೆ ಮೋದಿ ಸುಳ್ಳು ಹೇಳ್ತಾರೆ ಅಂತಾ ದೂಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಈವರೆಗೂ 40,060 ಜನ ಬಲಿ ಆಗಿದ್ದಾರೆ. ಅಪಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ