ಕೋವಿಡ್ ರೂಪಾಂತರಿ ಪತ್ತೆಗೆ ಪಾಲಿಕೆಯ ಮಹತ್ವದ ಹೆಜ್ಜೆ

ಗುರುವಾರ, 5 ಮೇ 2022 (20:57 IST)
ಬೆಂಗಳೂರು: ಈಗ ಕೋವಿಡ್ ರೂಪಾಂತರಿಯ ಅಂತಕ ನಗರದಲ್ಲಿ ಹೆಚ್ಚಾಗಿದೆ. ರೂಪಾಂತರಿ ಪತ್ತೆಗೆ ಮಹತ್ವ ಹೆಚ್ಚೆಯನ್ನು ಬಿಬಿಎಂಪಿ ಇರಿಸಿದ್ದು, ಪಾಲಿಕೆ ವ್ಯಾಪ್ತಿಯ 34 ಎಸ್.ಟಿ.ಪಿ ಕೊಳಚೆ ನೀರನ್ನು ಪರೀಕ್ಷಿಸಲು ಆರಂಭಿಸಲಾಗಿದೆ.
 
ಬಗ್ಗೆ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕ ಚಂದ್ರ ನೇತೃತ್ವದಲ್ಲಿ ಜಲ ಮಂಡಳಿ, ಖಾಸಗೀ ಪ್ರಯೋಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ಕೊರೋನಾ ರೂಪಾಂತರಿ ಸೋಂಕು ಪತ್ತೆ ಹಚ್ಚಲು ನಗರದ 34 ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಕೊಳಚೆ ನೀರನ್ನು ಇಂದಿನಿಂದ ಸಂಗ್ರಹಿಸಿ, ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
 
ಕೊಳಚೆ ನೀರಿನಿಂದಲೂ ಕೊರೋನಾ ರೂಪಾಂತರಿ, ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು.15 ದಿನಗಳ ಹಿಂದೆಯೇ ಕೊಳಚೆ ನೀರು ಪರೀಕ್ಷೆ ಮಾಡಿದ ಪರಿಣಾಮ ಹೆಚ್ಚು ಜನರಿಗೆ ಹರಡುವುದನ್ನು ಅಲ್ಲಿ ತಪ್ಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ಬಿಬಿಎಂಪಿಯಿಂದ ನಗರದಲ್ಲಿ ಕೋವಿಡ್ ರೂಪಾಂತರಿ ತಡೆಗಟ್ಟುವ ನಿಟ್ಟಿನಲ್ಲಿ 34 ಎಸ್.ಟಿ.ಪಿಗಳಿಂದ ನೀರು ಸಂಗ್ರಹಿಸಿ, ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಯನ್ನು ಬಿಬಿಎಂಪಿ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ