ದೇವಸ್ಥಾನಗಳ ಬಳಿ ತಂಬಾಕು ಉತ್ಪನ್ನ ಮಾರಾಟ ನಿಷೇಧ

ಭಾನುವಾರ, 17 ಸೆಪ್ಟಂಬರ್ 2023 (10:19 IST)
ಬೆಂಗಳೂರು : ಮುಜರಾಯಿ ಇಲಾಖೆಯ ದೇವಸ್ಥಾನಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟವನ್ನು ನಿಷೇಧಿಸಿದೆ ಮುಜರಾಯಿ ಇಲಾಖೆ ಆದೇಶ ಪ್ರಕಟಿಸಿದೆ.

ದೇವಸ್ಥಾನದ ಆಸುಪಾಸು ದೈವಿಕ ಕಳೆ ಇರುವುದರಿಂದ ಭಕ್ತರ ಧಾರ್ಮಿಕತೆಗೆ ಪೂರಕ ವಾತಾವರಣ ಕಲ್ಪಿಸಲು ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ. 

ಮುಜುರಾಯಿ ಇಲಾಖೆಯ ದೇವಾಲಯಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಬರೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ