ಶಕ್ತಿ ಯೋಜನೆ ಎಫೆಕ್ಟ್ : ದೇಗುಲಗಳ ಆದಾಯದಲ್ಲಿ ಹೆಚ್ಚಳ

ಬುಧವಾರ, 23 ಆಗಸ್ಟ್ 2023 (09:11 IST)
ಒಂದೇ ತಿಂಗಳಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ 11 ರವರೆಗೆ ಪ್ರತಿಷ್ಠಿತ 58 ದೇಗುಲಗಳಲ್ಲಿ ಇ- ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿತ್ತು.
 
ಈ ವರ್ಷ ಜೂನ್ 11 ರಿಂದ ಜುಲೈ 15 ರವರೆಗೆ 24.47 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಆದಾಯದಲ್ಲಿ ಭಾರೀ ಹೆಚ್ಚಳ ಕಂಡಿದೆ. ಇದನ್ನೂ ಓದಿ:

ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಸಂಗ್ರಹವಾಗಿರುವ ಆದಾಯದ ಆಧಾರದಲ್ಲಿ ಅಧಿಕೃತವಾಗಿ ಹೊಂದಿರುವ ಅಂಕಿ-ಅಂಶಗಳ ಪ್ರಕಾರ 2023-23ರಲ್ಲಿ ಅತ್ಯಂತ ಶ್ರೀಮಂತವಾದ ದೇವಸ್ಥಾನವೆಂದರೆ ಅದು ಕುಕ್ಕೆ ಸುಬ್ರಮಣ್ಯ. ಟಾಪ್ 1 ಸ್ಥಾನವನ್ನು ಕಾಯ್ದುಕೊಂಡಿರುವ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಅತ್ಯಂತ ಹೆಚ್ಚು ವರಮಾನವುಳ್ಳ ದೇವಸ್ಥಾನವಾಗಿದೆ. ಅದರ ಆದಾಯ ಬರೋಬ್ಬರಿ 123 ಕೋಟಿ 64 ಲಕ್ಷ ಆಗಿದೆ.

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ನಂತರದ ಸ್ಥಾನದಲ್ಲಿರೋದು ಕುಂದಾಪುರದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ. ಈ ದೇವಸ್ಥಾನಕ್ಕೆ ಹರಿದುಬಂದ ಆದಾಯ 59 ಕೋಟಿ 47 ಲಕ್ಷವಾಗಿದ್ದರೆ, ಖರ್ಚಾಗಿರುವುದು 33 ಕೋಟಿ 32 ಲಕ್ಷ. ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹರಿದುಬಂದ ಆದಾಯದ 50% ರಷ್ಟು ಇಲ್ಲಿ ಸಂಗ್ರಹವಾಗಿದೆ. ಇನ್ನು ಟಾಪ್ 3ರ ಸ್ಥಾನದಲ್ಲಿರುವುದು ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ ಮತ್ತು ಅರಮನೆ ಮುಜರಾಯಿ ದೇವಾಲಯಗಳು. ಇಲ್ಲಿ ಭಕ್ತಾದಿಗಳಿಂದ 52 ಕೋಟಿ 40 ಲಕ್ಷ ಸಂಗ್ರಹವಾಗಿದೆ.

ಟಾಪ್ 4ರ ಸ್ಥಾನದಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರ ದೇವಾಲಯವಿದೆ. ಇಲ್ಲಿ ಸಂಗ್ರಹವಾಗಿದ್ದು 36 ಕೋಟಿ 48 ಲಕ್ಷವಾದ್ರೆ ಬರೋಬ್ಬರಿ 35 ಕೋಟಿ 68 ಲಕ್ಷದಷ್ಟು ಖರ್ಚಾಗಿದೆ. ಉಳಿದಿರೋದು ಕೇವಲ ಅರ್ಧ ಕೋಟಿ ಮಾತ್ರ. ಟಾಪ್ 5ರ ಸ್ಥಾನದಲ್ಲಿ ಮಂಗಳೂರು ತಾಲೂಕು ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ. 32 ಕೋಟಿ 10 ಲಕ್ಷ ಆದಾಯದ ರೂಪದಲ್ಲಿ ಸಂಗ್ರಹವಾಗಿದ್ದು, 25 ಕೋಟಿ 97 ಲಕ್ಷದಷ್ಟು ಖರ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ