ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ರಸ್ತೆ ಗುಂಡಿಗಳದೇ ಕಾರುಬಾರು.
ರಸ್ತೆ ಗುಂಡಿ ಹೆಸರಲ್ಲಿ ಪ್ರತಿ ವರ್ಷ ಕೋಟಿ, ಕೋಟಿ ರೂ. ಲೂಟಿ ಮಾಡಲಾಗುತ್ತಿದೆ. ಇದೀಗ ಈ ಕೋಟಿ ಗುಂಡಿ ಅಡ್ಡ ದಾರಿ ತಪ್ಪಿಸಲು ಪಾಲಿಕೆ ಹೊಸ ದಾರಿ ಹಿಡಿದಿದೆ.
ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಸಲುವಾಗಿ ಬರೀ ವಂಚನೆ ಮಾಡುವುದೇ ದೊಡ್ಡ ದಂಧೆ ಮಾಡಿಕೊಂಡಿದೆ. ಅಡ್ಡರಸ್ತೆ, ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚಿದ್ದೀವಿ ಅಂತಾ ಲೆಕ್ಕ ಕೊಟ್ಟು ಕಾಲ ತಳ್ಳುತ್ತಿದೆ. ಈ ಸಮಸ್ಯೆ ತಪ್ಪಿಸಲು ಈಗ ಪಾಲಿಕೆ ಹೊಸ ದಾರಿ ಹಿಡಿದಿದ್ದು, ಆ್ಯಪ್ ಲೆಕ್ಕಾಚಾರದ ಮೂಲಕ ಗುಂಡಿ ಮುಚ್ಚಲು ಪಾಲಿಗೆ ಮುಂದಾಗಿದೆ.
ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ಗುಂಡಿಗಳನ್ನು ಪಾಲಿಕೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಗುರುತಿಸಲು ಅವಕಾಶ ಇದೆ. ಈ ಗುಂಡಿಗಳ ಆಳ, ಉದ್ದ ಗುರುತಿಸಿ ಗುಂಡಿ ಮುಚ್ಚುವ ಕಾರ್ಯ ನಡೆದ ಮೇಲೆ ಸಾಕ್ಷಿ ಸಮೇತ ಮಾಹಿತಿ ನೀಡಿದರೆ ಮಾತ್ರ ಹಣ ಬಿಡುಗಡೆಯ ಲೆಕ್ಕಚಾರ ಮಾಡಿಕೊಂಡಿದ್ದಾರೆ.