ಕಾವೇರಲಿದೆ ಬೆಳಗಾವಿ ಅಧಿವೇಶನ !

ಬುಧವಾರ, 22 ಡಿಸೆಂಬರ್ 2021 (08:42 IST)
ಬೆಳಗಾವಿ : ಇಂದು ಕೂಡ ಬೆಳಗಾವಿ ಅಧಿವೇಶನ ಕಾವೇರಲಿದೆ. ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ ಸಂಬಂಧ ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.
 
ವಿಪಕ್ಷಗಳ ವಿರೋಧದ ನಡುವೆಯೂ ಬಿಜೆಪಿ ನಿನ್ನೆ ಮಸೂದೆ ಮಂಡಿಸಿದೆ. ಇಂದು ಮಸೂದೆ ಕುರಿತ ಚರ್ಚೆಗೆ ಅವಕಾಶ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಇಂದೂ ‘ಮತಾಂತರ’ ಅಲ್ಲೋಲಕಲ್ಲೋಲ ನಡೆಯಲಿದೆ. ಇತ್ತ ಬಲವಂತದ ಮಾತಾಂತರ ನಿಷೇಧ ಮಸೂದೆಗೆ ಕಾಂಗ್ರೆಸ್ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ.

ಇಂದಿನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಕೆಡ ಕಾರಲು ಸಿದ್ಧರಾಗಿದ್ದಾರೆ. ಹಿಡನ್ ಅಜೆಂಡಾವನ್ನು ಬೆತ್ತಲೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದ್ರೆ, ರಾಜ್ಯದ ಶಾಂತಿ ಕೆಡಸಲು ಇದೊಂದು ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ. 

ರಾಜ್ಯದಲ್ಲಿ ಅಶಾಂತಿ ಮೂಡಿಸಲು. ರಾಜಕೀಯವಾಗಿ ಕೆಲ ವಿಷಯಗಳನ್ನ ವಿಷಯಾಂತರ ಮಾಡಲು ಈ ವಿಚಾರವನ್ನು ಸರ್ಕಾರ ಮುನ್ನೆಲೆಗೆ ತಂದಿದೆ. 21 ಸಚಿವರ ಮಕ್ಕಳು, ಮೊಮ್ಮಕ್ಕಳು ಕ್ರಿಶ್ಚಿಯನ್ ಸ್ಕೂಲ್ನಲ್ಲಿ ಓದುತ್ತಿದ್ದಾರೆ. ಸದನದಲ್ಲಿ ಮಸೂದೆಯ ಪ್ರತಿಯನ್ನು ಸಹ ಡಿಕೆಶಿ ಹರಿದು ಹಾಕಿದ್ರು. ಈ ವಿಚಾರವಾಗಿ ಸದನ ಇಂದೂ ಕಾವೇರುವುದು ಪಕ್ಕಾ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ