ಅಧಿವೇಶನ: ಇಂದಿನಿಂದ ಅಸಲಿ ಆಟ ಶುರು!

ಮಂಗಳವಾರ, 14 ಡಿಸೆಂಬರ್ 2021 (07:33 IST)
ಬೆಳಗಾವಿ : ವರ್ಷಕ್ಕೊಮ್ಮೆ ನಡೆಯುತ್ತಿದ್ದ ಜಾತ್ರೆಯಿಂದ ಕಳೆಗಟ್ಟುತ್ತಿದ್ದ ಕುಂದಾನಗರಿಯಲ್ಲೀಗ ಮೂರು ವರ್ಷಕ್ಕೊಮ್ಮೆ ಬಂದಿರುವ ಜಾತ್ರೆಯಲ್ಲೂ ಅದೇ ಕಳೆ.

ಆದರೆ ಅಬ್ಬರ, ಹಾರಾಟ ಮಾತ್ರ ತುಸು ಕುಗ್ಗಿದೆ. ಸಮಗಾಳಿಗೆ ಸಮ ಎಂಬಂತಹ ಬಿಸಿಲು… ಸಮ ಬಿಸಿಲಿಗೆ ಸಮ ಶೀತ ಎಂಬ ವಾತಾವರಣದಲ್ಲಿ ಮೂರು ವರ್ಷದ ಬಳಿಕ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ.

ಮತಾಂತರದ ನಿಷೇಧ ಕಾಯ್ದೆಯ ಚರ್ಚೆಯ ಬೆಂಕಿಗೆ ಸಚಿವ ಸುನಿಲ್ ಕುಮಾರ್ ಲವ್ ಜಿಹಾದ್ ಎಂಬ ತುಪ್ಪವನ್ನು ಸುರಿಯುವ ಮೂಲಕ ಅಧಿವೇಶನದ ಕಾವಿಗೆ ಚಾಲನೆ ಕೊಟ್ಟಿದ್ದಾರೆ.
ವಿಧಾನಮಂಡಲದಲ್ಲಿ ಇವತ್ತು ಬಹುತೇಕ ಸಮಯ ಸಂತಾಪದ ಸೂಚಕಕ್ಕೆ ಮೀಸಲಾಗಿತ್ತು. ನಟ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಒಂದೂವರೆ ತಿಂಗಳಾಗ್ತಿದೆ.

ಪುನೀತ್ ಅಪಾರ ಅಭಿಮಾನಿ ಬಳಗ ಇನ್ನೂ ಅರಗಿಸಿಕೊಳ್ಳಲು ಆಗ್ತಿಲ್ಲ. ಈ ನಡುವೆ ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಪುನೀತ್ ಸ್ಮರಣೆ ನಡೆಯಿತು.

ವಿಧಾನಸಭೆಯಲ್ಲಿ ಇವತ್ತು ಮಾಜಿ ರಾಜ್ಯಪಾಲ ರೋಸಯ್ಯ ಸಿಡಿಎಸ್ ಬಿಪಿನ್ ರಾವತ್, ನಟ ಪುನೀತ್, ಶಿವರಾಂ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ನಿರ್ಣಯ ಕೈಗೊಳ್ಳಲಾಯ್ತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ