ಬಿಜೆಪಿ ಅಧಿಕಾರಕ್ಕೆ ಬರಲ್ಲ: ಪ್ರಕಾಶ ರೈ ಭವಿಷ್ಯ

ಶನಿವಾರ, 28 ಏಪ್ರಿಲ್ 2018 (13:53 IST)
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲ್ಲ. ಜನ ಮೂರ್ಖರಲ್ಲ ಎಂದು ಸಂವಿಧಾನ ಉಳಿಸಿ ಸಮಾವೇಶದಲ್ಲಿ ನಟ ಪ್ರಕಾಶ್ ರೈ ಹೇಳಿಕೆ ನೀಡಿದ್ದಾರೆ. 
ಮಂಗಳೂರು ದಕ್ಷಿಣದ ವೇದವ್ಯಾಸ್ ಕಾಮತ್ ಪತ್ನಿ ಹಿಂದುತ್ವದ ಹೆಸರಲ್ಲಿ ಓಟ್ ಕೇಳೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 
ಧರ್ಮದ ಹೆಸರಲ್ಲಿ ವಿಂಗಡಿಸಿ ಓಟ್ ಕೇಳಬೇಡಿ.‌ ಪ್ರಜಾಪ್ರಭುತ್ವದಲ್ಲಿ ಜಾತಿ ಧರ್ಮದ ಹೆಸರಲ್ಲಿ ಓಟು ಕೇಳುವ ಹಾಗಿಲ್ಲ ಎಂದು ಗುಡುಗಿದರು. 
 
ಹಿಂದೂ ಧರ್ಮವನ್ನು ಯಾರು ಗುತ್ತಿಗೆ ತೆಗೊಂಡಿಲ್ಲ. ಯಾವ ಧರ್ಮ ಕೂಡಾ ಧರ್ಮದ ಹೆಸರಲ್ಲಿ ರಾಜಕೀಯ ಮಾಡಬಾರದು. ಹೆಂಗಸರನ್ನು ಮರ್ಯಾದೆಯಿಂದ ನೋಡದ ಪಕ್ಷ ಅತ್ಯಾಚಾರಿಗಳನ್ನು ಬೆಂಬಲಿಸೋ ಪಕ್ಷ, ಬಿಜೆಪಿ ಪಕ್ಷಕ್ಕೆ ಯಾವುದೇ ಸಿದ್ದಾಂತ ಇಲ್ಲ ಎಂದು ವಾಗ್ದಾಳಿ ನಡೆಸಿದರು.
 
ಸಂಘದ ಸಿದ್ದಾಂತವೇ ಬಿಜೆಪಿ ಸಿದ್ದಾಂತ. ಬಿಜೆಪಿ ಬೆದರುಗೊಂಬೆ ಪಕ್ಷ. ಬಿಜೆಪಿಗೆ ಇಲ್ಲಿ ಮಾತನಾಡುವ ನಾಯಕರಿಲ್ಲ. ನಿಮ್ಮ ವಯಸ್ಸೇನು ಅಮಿತ್ ಶಾ ವಯಸ್ಸೇನು ಅವರ ಕಾಲಿಗೆ ಯಾಕೆ ಬೀಳ್ತೀರಿ ಎಂದಿದ್ದಾರೆ. ಅಮಿತ್ ಶಾಗೆ ಯಾವ ಅರ್ಹತೆ ಇದೆ ದೇಶ ಆಳಲು ಎಂದ ಅವರು 
ಅಮಿತ್ ಶಾ ಕುಟಿಲ ತಂತ್ರ ನಮ್ ದೇಶಕ್ಕೆ ಬೇಕಾದ ಯೋಗ್ಯತೆ ಅಲ್ಲ ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದರು. 
 
ಮೋದಿಗೆ ಮತಿಭ್ರಮನೆ ಬಂದಿದೆ. ಗುಜರಾತ್ ನಲ್ಲಿ ಗುಜರಾತಿ ಎಂದು ಮಾತನಾಡ್ತಾರೆ. ಇವಾಗ ಕನ್ನಡಿಗ ಆಗಲು ಹೊರಟಿದ್ದಾರೆ. 2019 ರ ಬಳಿಕ ಮೋದಿ ನಿರುದ್ಯೋಗಿಯಾಗಲಿದ್ದಾರೆ. ಬಳಿಕ ಕರ್ನಾಟಕದ ವಯಸ್ಕರ ಶಾಲೆಗೆ ಬಂದು ಕನ್ನಡ ಕಲಿಯಿರಿ. ಪಕೋಡಾ ಮಾಡಿ ಎಂದು ಹೇಳುವ ಪ್ರಧಾನಿ ಚಾಯ್ ಮಾಡಲಿ. ರೆಡ್ಡಿ ಸಹೋದರರು ಬಂದರೆ ನಮ್ಮ ಬೆಟ್ಟ ಗುಡ್ಡಗಳನ್ಜು ಯಾರ ಕಾಪಾಡುವುದು ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ