ಈ ಸಂದರ್ಭದಲ್ಲಿ ಮಠದ ವಿದ್ಯಾರ್ಥಿಗಳು ಹೂಗಳನ್ನು ನೀಡಿ ಸ್ವಾಗತಿಸಿದರು. ಬಳಿಕ ಗವಿಸಿದ್ದೇಶ್ವರ ಮಠದ ಕತೃ ಗದ್ದುಗೆಯ ದರ್ಶನವನ್ನು ಪಡೆಯಲು ಅಮಿತ್ ಶಾ ಹೋದರು. ಆದ್ರೆ ಈ ವೇಳೆಯಲ್ಲಿ ಅಮಿತ್ ಶಾ ಅದೇಷ್ಟೇ ಪ್ರಯತ್ನ ಮಾಡಿದರೂ ಸಹ ಅಮಿತ್ ಶಾ ಗರ್ಭ ಗುಡಿಯ ಒಳಗಡೆ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಆದ್ರೆ ಈ ವೇಳೆಯಲ್ಲಿ ಅಮಿತ್ ಶಾ ಅನಿವಾರ್ಯವಾಗಿ ಹೊರಗಡೆ ನಿಂತುಕೊಂಡು ಗವಿಸಿದ್ದೇಶ್ವರ ದರ್ಶನ ಪಡೆದುಕೊಂಡರು.
ಕೊಪ್ಪಳ ಕಾರ್ಯಕ್ರಮ ಬಳಿಕ ಅಮಿತ್ ಶಾ ನೇರವಾಗಿ ನೂತನ ತಾಲೂಕ ಕುಕನೂರು ಪಟ್ಟಣಕ್ಕೆ ಆಗಮಿಸಿದರು. ಈ ವೇಳೆಯಲ್ಲಿ ಅವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆಯಲ್ಲಿ ಅಮಿತ್ ಶಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಮೇ 15 ರಂದು ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್ ಸೋತು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.